ಇತ್ತೀಚಿಗೆ ಲೋಕಾರ್ಪಣೆಗೊಂಡು ಜನಸಾಮಾನ್ಯರ ಸೇವೆಗೆ ಲಭ್ಯವಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆ ಜಿಲ್ಲೆಯ ಹೆಸರಿನಿಂದಲೇ ಕರೆಯುವುದು ಸೂಕ್ತವಾಗಿದೆ.
ಈ ನಿರ್ಧಾರದಿಂದ ಯಾವುದೇ ಸಂಘ, ಸಂಸ್ಥೆ, ಸಂತರ, ಶರಣರಿಗೆ ಅಪಮಾನ ಮಾಡಿದ ಹಾಗೇ ಆಗುವುದಿಲ್ಲ. ಒಂದು ವೇಳೆ ಸಂಘ, ಸಂಸ್ಥೆಗಳ ಬೇಡಿಕೆಗೆ ಪೂರಕವಾಗಿ ನಿರ್ಧಾರ ಕೈಗೊಂಡರೆ ಸರ್ಕಾರ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಅಲ್ಲದೇ ಒಂದು ಹೆಸರು ಇಟ್ಟರೆ ಮತ್ತೊಂದು ಸಮುದಾಯದವರಿಗೆ ನೋವಾಗಬಹುದು ಇದರಿಂದ ಯಾರಿಗೂ ಸಂತೃಪ್ತಿ ಪಡಿಸಿದ ಹಾಗೇ ಆಗುವುದಿಲ್ಲ ಆದ್ದರಿಂದ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಹೆಸರಿನಿಂದಲೇ ಕರೆಯುವುದು ಸೂಕ್ತವಾಗಿದೆ.