ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಅಪ್ಪಾಜಿ ಗುರುಕುಲ ಶಾಲೆಯಲ್ಲಿ 50 ಮಕ್ಕಳಿಗೆ ಉಚಿತ ಪ್ರವೇಶ

0
221

ಕಲಬುರಗಿ: ಉದನೂರಿನ ಅಪ್ಪಾಜಿ ಶಿಕ್ಷಣ ಟ್ರಸ್ಟ್ ಸಂಚಾಲಿತ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ  ಟ್ರಸ್ಟ್‌ನ ದಶಮಾನೋತ್ಸವ ಅಂಗವಾಗಿ  6ನೇ ತರಗತಿಯಿಂದ 10ನೇ ತರಗತಿಯ 50 ಮಕ್ಕಳಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದ್ದು, ಈ ಸುವರ್ಣ ಅವಕಾಶವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಪಡೆದುಕೊಳ್ಳಬೇಕು ಎಂದು ಅಪ್ಪಾಜಿ ಶಿಕ್ಷಣ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಭಾಗಮ್ಮ ರಾಜಕುಮಾರ ಉದನೂರು, ಕಾರ್ಯದಶಿಂ ರಾಜಕುಮಾರ ಬಿ.ಉದನೂರ ತಿಳಿಸಿದ್ದಾರೆ.

“50 ಮಕ್ಕಳಿಗೆ ಉಚಿತ ಪ್ರವೇಶ: ಕಳೆದ ವರ್ಷ ಜಿಡಗಾದ ಶ್ರೀ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಮುಗಳಖೋಡದಲ್ಲಿ ನಡೆದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಶಿವಯೋಗಳ ಸಂಕಲ್ಪ ಯಾತ್ರೆಅಂಗವಾಗಿ 50 ಮಕ್ಕಳಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿತ್ತು. ಈಗ ಟ್ರಸ್ಟ್ದಶಮಾನೋತ್ಸವ ಅಂಗವಾಗಿ 6ನೇ ತರಗತಿಯಿಂದ 10ನೇ ತರಗತಿಯ 50 ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು.”

Contact Your\'s Advertisement; 9902492681

 

ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ನರ್ಸರಿಯಿಂದ ೧೦ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಅಪ್ಪಾಜಿ ಗುರುಕುಲ ಆಂಗ್ಲಮಾಧ್ಯಮ ಶಾಲೆಯು 10ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದೆ.

ಗುರುಕುಲ ಮಾದರಿಯಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡಿ, ಮಕ್ಕಳಲ್ಲಿ ಶಿಸ್ತು ಮತ್ತು ಆತ್ಮಬಲ ಹೆಚ್ಚಿಸುವ ದಿಸೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವುದು, ಪ್ರತಿ ಮಗುವಿನ ವೈಯಕ್ತಿಕ ಗಮನ ನೀಡಲು ಅನುಕೂಲವಾಗಲಿ ಎಂಬ ಕಾರಣದಿಂದ ಪ್ರತಿ ತರಗತಿಗೆ ಸೀಮಿತ ಸಂಖ್ಯೆಯಲ್ಲಿ ದಾಖಲಿಸಿಕೊಳ್ಳುವುದು, ಮಕ್ಕಳ ಮನೋವಿಕಾಸಕ್ಕಾಗಿ ಸಾಂಸ್ಕೃತಿಕ, ಸಾಹಿತ್ಯಕ, ಚಟುವಟಿಕೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಮಾಡುವುದು. ಕ್ರೀಡಾ ಮನೋಭಾವದ ಬೆಳವಣಿಗೆಗೆ ಒತ್ತು ನೀಡುವುದು ಸಂಸ್ಥೆಯ ಗುರಿಯಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು, ಕಂಪ್ಯೂಟರ್ ಬಳಕೆ, ಚರ್ಚೆ, ಸಂವಾದ, ಚಿತ್ರ ಕಲೆ, ಸಂಗೀತಾಸಕ್ತಿಯನ್ನು ಮಕ್ಕಳಲ್ಲಿ ಬೆಳೆಸುವುದು ಪ್ರಮುಖ ಉzಶವಿದ್ದು, ಇದರಿಂದ ಮಕ್ಕಳ ಭವಿಷ್ಯಕ್ಕೆ ಉತ್ತಮ ತಳಹದಿ ನಿರ್ಮಾಣ ಮಾಡಿದಂತೆ ಆಗುತ್ತದೆ. ವಿದ್ಯಾರ್ಜನೆಗೆ ಮುಖ್ಯವಾಗಿ ಬೇಕಾಗಿರುವ ಉತ್ತಮ ವಾತಾವರಣ ಲಭ್ಯವಿದೆ. ಶುದ್ಧ ಕುಡಿಯುವ ನೀರಿನ ಘಟಕವಿದೆ. ಆಟದ ಮೈದಾನ, ಕಾಲಕಾಲಕ್ಕೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ಮಕ್ಕಳ ಪ್ರಗತಿ ಪರಿಶೀಲನೆಗೆ ಪಾಲಕರೊಂದಿಗೆ ಸಮಾಲೋಚನೆ ಕೈಗೊಳ್ಳುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here