ಪೊಲೀಸ್ ವೈಫಲ್ಯ ಖಂಡಿಸಿ ಹುಣಸಗಿ ಪಟ್ಟಣದಲ್ಲಿ ಕಾಂಗ್ರೇಸ್ ಬೃಹತ್ ಪ್ರತಿಭಟನೆ

0
162

ಸುರಪುರ: ಇತ್ತೀಚೆಗೆ ಕೊಡೇಕಲ್ ಗ್ರಾಮದಲ್ಲಿ ನನ್ನ ಹುಟ್ಟು ಹಬ್ಬದ ಪ್ರಯುಕ ಕಾಂಗ್ರೇಸ್ ಕಾರ್ಯಕರ್ತನೊಬ್ಬ ಹುಟ್ಟು ಹಬ್ಬದ ಶುಭಾಶಯ ಕೋರುವ ಬ್ಯಾನರಗಳನ್ನು ಕಟ್ಟುವಾಗ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರ ಸಹೋದರ ಹಣಮಂತನಾಯಕ (ಬಬ್ಲುಗೌಡ) ಹಾಗೂ ಹಿಂಬಾಲಕರು ಸೇರಿಕೊಂಡು ನಮ್ಮ ಕಾಂಗ್ರೇಸ ಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರ ಬೈಕಗಳನ್ನು ಸುಟ್ಟು ಕಾಲುವೆಗೆ ಎಸಗಿದ್ದಾರೆ.

ತರ ಕೊಡೇಕಲ್ ಪಟ್ಟಣದಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಭಯದ ವಾತಾರವಣ ಉಂಟು ಮಾಡಿದ್ದಾರೆ. ಈ ಘಟನೆಯ ಕುರಿತು ಪೋಲಿಸರು ಯಾರೋಬ್ಬ ಆರೋಪಿಯನ್ನು ಬಂಧಿಸದೇ ಮುಕ್ತವಾಗಿ ಓಡಾಡಲು ಬಿಟ್ಟುದ್ದು ಇಲ್ಲಿಯ ಪೊಲೀಸರು ಮಾಡುವ ಕಾರ್ಯವೈಖರಿಯ ಕೈಗನ್ನಡಿಯಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸುರಪುರ ಮತ್ತು ಹುಣಸಗಿ ತಾಲೂಕಿನ ಪೊಲೀಸರ ವೈಫಲ್ಯವನ್ನು ಖಂಡಿಸಿ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಆ ಆರೋಪಿಗಳು ಈಗ ಠಾಣಾ ವ್ಯಾಪ್ತಿಯಲ್ಲಿ ಜಾಮಿನು ಪಡೆದುಕೊಂಡು ರಾಜರೋಷವಾಗಿ ಓಡಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಎಸಗಿದ್ದಲ್ಲದೇ ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಹಾಗೂ ಸಂಬಂಧವಿಲ್ಲದ ಕಾರ್ಯಕರ್ತರ ಮೇಲೆ ಪೋಲಿಸರು ಪ್ರತಿ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಕ್ಷೇತ್ರದಲ್ಲಿ ಪೋಲಿಸ್ ಇಲಾಖೆ ಇದಕ್ಕೆ ಸಹಕರಿಸುತ್ತಿದೆ ಎಂದು ಕಂಡು ಬರುತ್ತದೆ.

ಅನೇಕ ಗ್ರಾಮಗಳಲ್ಲಿ ದಬ್ಬಾಳಿಕೆ ಹಾಗೂ ದೌರ್ಜನ್ಯ ಘಟನೆಗಳು ನಡೆಯುತ್ತಿದ್ದು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಅದರಲ್ಲೂ ಕೊಡೇಕಲ್ ಸುತ್ತಲಿನ ಅನೇಕ ಗ್ರಾಮಗಳಲ್ಲಿ ನಡೆದಿರುವ ಕೊಲೆ ಘಟನೆ ಪ್ರಕರಣಗಳನ್ನು ಪೋಲಿಸ್ ಇಲಾಖೆ ಸಹಜ ಸಾವು ಎಂದು ದಾಖಲಿಸಿ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಅಮಾಯಕ ವ್ಯಕ್ತಿಗಳ ಕೊಲೆ ಪ್ರಕರಣಗಳನ್ನು ಪೋಲಿಸರು ಸರಿಯಾದ ತನಿಖೆ ಮಾಡದೇ ರಾಜಕೀಯ ಒತ್ತಡಕ್ಕೆ ಮಣಿದು ಸಹಜ ಸಾವು ಪ್ರಕರಣ ಎಂದು ದಾಖಲಿಸಿಕೊಂಡು ಅಮಾಯಕ ಜನರ ಮೇಲೆ ಹಲ್ಲೆವೆಸಗಿ ದೌರ್ಜನ್ಯವೆಸಗುತ್ತಿರುವ ಅನೇಕ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗು ಮುನ್ನ ನಗರದ ಮಹಾಂತಸ್ವಾಮಿ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಸಾವಿರಾರು ಜನನ ಕಾರ್ಯಕರ್ತರು ಪೊಲೀಸ್ ವೈಫಲ್ಯ ಖಂಡನೆಯ ಭಿತ್ತಿ ಪತ್ರಗಳ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ಒಂದು ದಿನದ ಧರಣಿ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ ವಿನಯಕುಮಾರ ಪಾಟೀಲ್ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್, ವಿಠ್ಠಲ್ ಯಾದವ್ ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್,ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್,ರಾಜಾ ರೂಪಕುಮಾರ ನಾಯಕ,ರಾಜಾ ವೇಣುಗೋಪಾಲ ನಾಯಕ, ಸುರಪೂರ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾಧ್ಯಾಪೂರ,ಮುದಿಗೌಡ ಕುಪ್ಪಿ, ನಾಗಣ್ಣ ಸಾಹು ದಂಡಿನ,ರಾಜಾ ಸಂತೋಷ ನಾಯಕ,ಅಬ್ದುಲಗಫೂರ ನಗನೂರಿ,ಅಬ್ದುಲ್ ಅಲಿಂ ಗೋಗಿ,ಪ್ರಕಾಶ ಗುತ್ತೇದಾರ,ಅಹೈಮದ್ ಪಠಾಣ,ಚಂದ್ರಶೇಖರ ದಂಡಿನ್,ಸೂಗುರೇಶ ವಾರದ,ಆದಪ್ಪ ಹೊಸಮನಿ,ದಾವುದ್ ಪಠಾಣ, ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here