ಪೌರತ್ವ ಕಾಯ್ದೆ ರದ್ದುತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಮಹಿಳಾ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

0
84

ಕಲಬುರಗಿ: ವಿವಾದಾಸ್ಪದ ಪೌರತ್ವ ಕಾಯ್ದೆ ಮತ್ತು ಪೊಲೀಸ್ ಆಯುಕ್ತ ಹರ್ಷಾ ಅಮಾನತು ಹಾಗೂ ಮಂಗಳೂರು ಘಟನೆ ನ್ಯಾಯಾಂಗ ತನಿಗೆ ಆಗ್ರಹಿಸಿ ವಿವಿಧ ಮಹಿಳಾ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ಅಖಿಲ ಭಾರತೀಯ ಜನವಾಧಿ ಮಹಿಳಾ ಸಂಘಟನೆ ಮತ್ತು ವಿವಿಧ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ನಗರದ ನ್ಯಾಷನಲ್ ಕಾಲೇಜದುಂದ ಜಗತ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಪೌರತ್ವ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿ ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಾಹಿತಿ ಕೆ. ನೀಲಾ, ರಾಬಿಯಾ ಬೇಗಂ, ನೂರಾರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು ಮತ್ತು ಮಾಹಿಳಾ ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪೌರತ್ವ ಕಾಯ್ದೆ ಮೂಲಕ ಬಿಜೆಪಿ ಮೋದಿ ಮತ್ತು ಅಮಿತ್ ಶಾ ಸರಕಾರ ಒಡೆದು ಆಳುವ ನೀತಿ ಅನುಸರಿಸುತಿದ್ದಾರೆ, ಪೌರತ್ವ ಕಾಯ್ದೆ ಸಂವಿಧಾನದ ವಿರುದ್ಧವಾಗಿದ್ದು, ಇದನ್ನು ಪ್ರತಿಯೊಬ್ಬ ಭಾರತೀಯ ನಾಗರಿಕರು ಖಂಡಿಸಿದೆ,ಸರಕಾರ ಕೊಡಲೆ ಪೌರತ್ವ ಕಾಯ್ದೆ ಮತ್ತು ಎನ್.ಆರ್.ಸಿ ರದ್ದು ಪಡೆಸುವವರೆಗೆ ನಮ್ಮ ಹೋರಾಟ ಇದೇ ರೀತಿ ಮುಂದುವರೆಯುತದೆ.       – ಕೆ. ನೀಲಾ, ಸಾಹಿತಿ ಮತ್ತು ಮಹಿಳಾ ಹೋರಾಟಗಾರ್ತಿ

ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಆಲಿಯಾ ಶೀರಿನ್, ವಿದ್ಯಾರ್ಥಿಗಳು ಮತ್ತು ಮಹಿಳಾ ಹೋರಾಟಗಾರರು ಇದ್ದರು.

ಮಹಿಳೆಯರಿಗೆ ಮುಸ್ಲಿಂ ಮುಖಂಡರಿಂದ ಸರ್ವಗಾಲು ನೀಡಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿ, ಪ್ರತಿಭಟನೆಯ ನಂತರ ನಾಗರಿಕರು ಕಲಬುರಗಿ ಮಹಿಳೆಯರಿಗೆ ಜೈ ಕಾರ ಹಾಕುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳಿಯೆರಿಗೆ  ಮತ್ತು ಕಲಬುರಗಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here