ಚರಗ ಚೆಲ್ಲಿ ಸಂಭ್ರಮದಿಂದ ಎಳ್ಳು ಅಮಾವಾಸ್ಯೆ ಆಚರಣೆ

0
116

ಸುರಪುರ: ನಗರ ಸೇರಿದಂತೆ ತಾಲೂಕಿನಾದ್ಯಂತ ಎಳ್ಳು ಅಮಾವಾಸ್ಯೆಯನ್ನು ರೈತ ಸಮುದಾಯ ಅತ್ಯಂತ ಸಂಭ್ರಮ ಸಡಗರದಿಂದ ಚರಗ ಚೆಲ್ಲುವುದರ ಮೂಲಕ ಹಬ್ಬವನ್ನು ಆಚರಿಸಿದರು.

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅತ್ಯಂತ ಸಂಭ್ರಮ ತರುವ ಹಬ್ಬವೆಂದರೇ ಎಳ್ಳು ಅಮಾವಾಸ್ಯೆ, ಗ್ರಾಮೀಣ ಭಾಗದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವೂ ಇಂಗಾರು ಹಂಗಾಮಿನ ವೇಳೆ ಆಗಮಿಸುವದರಿಂದ ರೈತರು ಬಿತ್ತುವ ಫಸಲುಗಳಾದ ಜೋಳ, ಗೋದಿ, ನೆಲ ಗಡಲೆ, ಇತ್ಯಾದಿ ಬೆಳೆಗಳು ಅತ್ಯಂತ ಉಲುಸಾಗಿ ಬೆಳೆಯಲೆಂದು ಚರಗ ಚೆಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಆಚರಿಸುವುದು ಸಂಪ್ರದಾಯವಾಗಿದೆ. ಮುಂಜಾನೆ ಮಹಿಳೆಯರು ಮಕ್ಕಳು ಸಂಭ್ರಮ ಸಡಗರದಿಂದ ಹೊಸ ಹೊಸ ಬಟ್ಟೆಗಳನ್ನು ತೊಟ್ಟು, ವಿವಿಧ ಆಹಾರ ಪದಾರ್ಥಗಳಾದ ಮೆಂತ್ಯೆ ಕಡುಬು, ಭರ್ತ, ಭಜ್ಜಿ, ಶೇಂಗಾದ ಹೊಳಿಗೆ, ಕರಿಗಡುಬು, ನುಚ್ಚು, ಅಂಬಲಿ ಹುಗ್ಗಿ ತಯಾರಿಸಿಕೊಂಡು ತಮ್ಮ ತಮ್ಮ ಹೊಲ ಗದ್ದೆಗಳಿಗೆ ತೆರಳಿ ಬನ್ನಿ ಮರದ ಹತ್ತಿರ ಕಲ್ಲುಗಳನ್ನು ಹಾಗೂ ಲಕ್ಷ್ಮೀಯನ್ನು ಕೂಡಿಸಿ ಕುಪ್ಪಸ, ಬಳೆ ತೊಡಿಸಿ, ಅರಿಶಿಣ ಕುಂಕುಮ ಹಾಗೂ ಹೂವನ್ನು ಮುಡಿಸಿ ಭೂದೇವಿಗೆ ಪೂಜಿಸಿದ ನಂತರ ತಮ್ಮ ಹೊಲದಲ್ಲಿ ಬೆಳೆದ ಫಸಲು ಸಮೃದ್ಧವಾಗಿ ಬರಲಿ ಎಂದು ಆಶಿಸಿ ಹೊಲದ ನಾಲ್ಕು ದಿಕ್ಕುಗಳಲ್ಲಿ ಚರಗವನ್ನು ಚೆಲ್ಲಿದರು.

Contact Your\'s Advertisement; 9902492681

ಇದೇ ವೇಳೆ ಸುತ್ತಮುತ್ತಲಿನ ಬಂಧು ಮಿತ್ರರನ್ನು, ಸಂಬಂಧಿಕರನ್ನು ಕರೆದು ಸಾಮೂಹಿಕ ಸಹಪಂಕ್ತಿ ಭೋಜವನ್ನು ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಹೆಮನೂರು ಗ್ರಾಮದ ಪ್ರಗತಿ ಪರ ರೈತರಾದ ಚಂದ್ರಯ್ಯಗೌಡ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here