ರುಕ್ಮಾಪುರ ಗ್ರಾಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ

0
309

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮಕ್ಕೆ ಕರ್ನಾಟಕ ಸರಕಾರದ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿದರು.ಶಹಾಪುರದಲ್ಲಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ರುಕ್ಮಾಪುರದಲ್ಲಿರುವ ನಿವೃತ್ತ ಎಸ್.ಪಿ ಚಂದ್ರಕಾಂತ ಭಂಡಾರೆಯವರ ಫಾರ್ಮ ಹೌಸಿಗೆ ಬಂದು ಕೆಲ ಕಾಲ ಕಳೆದರು ಹಾಗು ಆಹಾರ ಸೇವಿಸಿ ನಂತೆ ಭಂಡಾರೆಯವರು ತೋಟದಲ್ಲಿನ ಹಣ್ಣುಗಳು ಸವಿದು ಸಂತೋಷಪಟ್ಟರು.

ಈ ಸಂದರ್ಭದಲ್ಲಿ ಇತ್ತೀಚೆಗೆ ತನ್ನ ಅಂಗಾಂಗಗಳ ದಾನ ಮಾಡಿ ಹಲವರ ಜೀವಕ್ಕೆ ವರವಾಗಿದ್ದ ಗ್ರಾಮದ ಡಬಗಾ ಕುಟುಂಬದ ಯುವಕ ಕಾರ್ತಿಕ ಕೀರಪ್ಪಾ ಬಡಗಾ ಕುಟುಂಬದವರಿಗೆ ಭೇಟಿ ಮಾಡಿ ಕಾರ್ತಿಕನ ಸಾವು ವ್ಯರ್ಥಗೊಳಿಸದೆ ಮಾನವೀಯವಾಗಿ ಯೋಚಿಸಿದ ಕುಟುಂಬ ವರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಎಸ್.ಪಿ ಚಂದ್ರಕಾಂತ ಭಂಡಾರೆಯವರು ಆರೋಗ್ಯ ಸಚಿವರಿಗೆ ದೂರವಾಣಿ ಮೂಲಕ ಬಡಗಾ ಕುಟುಂಬಕ್ಕ ನೆರವು ನೀಡುವಂತೆ ಮನವಿ ಮಾಡಿದಾಗ.ತಮ್ಮ ಆರೋಗ್ಯ ಇಲಾಖೆಯಿಂದ ಹಾಗು ಮುಖ್ಯಮಂತ್ರಿಗಳಿಂದ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಪೌರತ್ವ ಕಾಯಿದೆಯ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ವಿವರಿಸುತ್ತಾ ಮಾತನಾಡಿ,ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಎಲ್ಲಾ ವಿಚಾರಿಸಿಯೇ ಈ ಕಾಯಿದೆಯನ್ನು ರೂಪಿಸಿದ್ದಾರೆ.ಪೌರತ್ವ ಕಾಯಿದೆಯಿಂದ ದೇಶದಲ್ಲಿನ ಯಾವುದೆ ಧರ್ಮದವರಿಗೂ ತೊಂದರೆಯಾಗುವುದಿಲ್ಲ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ ಎಂದರು.

ಸಂಕ್ರಾತಿ ಒಳಗಡೆಯೆ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ನಿಭಾಯಿಸುವುದಾಗಿ ತಿಳಿಸಿದರು.ಅಲ್ಲದೆ ಎಸ್ಟಿ ಸಮಾಜದ ಏಳಿಗೆಗಾಗಿ ಮೀಸಲಾತಿ ಹೆಚ್ಚಳ ಮಾಡುವ ಅವಶ್ಯಕತೆಯಿದೆ.ಇದರ ಕುರಿತು ಸರಕಾರದಿಂದಲೂ ಉತ್ತಮವಾದ ಪ್ರತಿಕ್ರೀಯೆ ವ್ಯಕ್ತವಾಗಿದೆ.ಮುಂದೆ ಮೀಸಲಾತಿ ಹೆಚ್ಚಳವಾಗುವ ಆಶಾಭಾವನೆ ಹೊಂದಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ನೂತನ ಸದಸ್ಯರಾದ ಡಾ: ರಂಗರಾಜ ವನದುರ್ಗ ಹಾಗು ಅನೇಕ ಜನ ಅಧಿಕಾರಿಗಳು ಮುಖಂಡರು ಮತ್ತು ಗ್ರಾಮಸ್ಥರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here