- ಶಿವರಂಜನ್ ಸತ್ಯಂಪೇಟೆ
ಕಲಬುರಗಿ: ಸದ್ಯ ಕೇವಲ ಐದು ಜನ ಮಾತ್ರ ರಂಗ ಕಲಾವಿದರಿದ್ದು, ಉಳಿದ ಹತ್ತು ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ಕೊಟ್ಟು, ರಂಗ ಚಟುವಟಿಕೆಗಳಿಗೆ ಸೂಕ್ತ ಪ್ಲಾಟ್ ಫಾರಂ ಕಲ್ಪಿಸಲಾಗುವುದು ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ಸಾಂಸ್ಕೃತಿಕ ಭವನದಲ್ಲಿರುವ ರಂಗಾಯಣ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರಂಗಾಯಣ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಯಾರೊಬ್ಬರೂ ತಮ್ಮ ಪೂರ್ಣ ಅವಧಿಯನ್ನು ಮುಗಿಸಿಲ್ಲ. ಆರಂಭದಲ್ಲಿ ಅನೇಕ ತೊಂದರೆಗಳು ಕೂಡ ಇದ್ದವು. ಆದರೆ ಇದೀಗ ಎಲ್ಲ ಬಗೆಯ ವ್ಯವಸ್ಥೆಯಿದ್ದು, ಕಲಾವಿದರ ಕೊರತೆ ಮಾತ್ರ ಇದೆ ಎಂದು ಅವರು “ಇ-ಮೀಡಿಯಾ ಲೈನ್”ಗೆ ತಿಳಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಲಾವಿದರು ಹಾಗೂ ಕಲಾಸಕ್ತರಿಗೆ ಕೊರತೆಯಿಲ್ಲ. ಆದರೆ ಇನ್ಯಾವುದೋ ಬೇರೆ ಬೇರೆ ಕಾರಣಗಳಿಂದ ಇಲ್ಲಿಯವರೆಗೆ ರಂಗ ಚಟುವಟಿಕೆಗಳು ನಿಷ್ಕ್ರಿಯಗೊಂಡಿದ್ದವು. ಇನ್ನು ಮುಂದೆ ಈ ಭಾಗದ ರಂಗಭೂಮಿಯನ್ನು ಪುನಶ್ಚೇತನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ರಂಗಾಯಣಕ್ಕೆ ಕಲಾವಿದರ ನೇಮಕಕ್ಕಾಗಿ ಶೀಘ್ರದಲ್ಲೇ ಅರ್ಜಿ ಕರೆಯಲಾಗುವುದು. ಎಲ್ಲ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿದ್ಯದ ಜೊತೆಗೆ ಪ್ರತಿಭಾವಂತ ಕಲಾವಿದರನ್ನು ರಂಗಾಯಣಕ್ಕೆ ನೇಮಕ ಮಾಡಿಕೊಳ್ಳಲಾಗುವುದು. ಮೇಲಾಗಿ ಕಲಾವಿದರ ಗೌರವ ಸಂಭಾವನೆ ಹೆಚ್ಚಳಕ್ಕೆ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದರ ಜೊತೆ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಟಕ, ತರಬೇತಿ, ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಂಗ ಚಟುವಟಿಕೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಇರಾದೆ ತಮ್ಮದು ಎಂದು ವಿವರಿಸಿದರು. ಇದಕ್ಕೆ ರಂಗಕರ್ಮಿ ಹಾಗೂ ರಂಗಾಸಕ್ತ ಸಾಂಸ್ಕೃತಿಕ ಮನಸ್ಸುಗಳು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಲಬುರಗಿ ರಂಗಾಯಣಕ್ಕೆ ಕಲಾವಿದರ ನೇಮಕ ಮೊದಲ ಆದ್ಯತೆ ಎಂದ ನಿರ್ದೇಶಕ ಪ್ರಭಾಕರ ಜೋಶಿ – ಇ ಮೀಡಿಯಾ ಲೈನ್
logbesrzl http://www.gz2xj1f01o822pk9p4q1i0rl53z7u16ts.org/
alogbesrzl
[url=http://www.gz2xj1f01o822pk9p4q1i0rl53z7u16ts.org/]ulogbesrzl[/url]