ತಿಮ್ಮಾಪುರದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಆಚರಣೆ

0
62

ಸುರಪುರ: ಸೊನ್ನಲಾಪುರದಲ್ಲಿ ಜನಸಿದ ಸಿದ್ದರಾಮೇಶ್ವರರು ಶ್ರೀ ಶೈಲ ಮಲ್ಲಿಕಾರ್ಜುನನನ್ನು ಪ್ರತ್ಯಕ್ಷವಾಗಿ ಕಾಣುವ ಮೂಲಕ ಅವರ ಪರಮ ಭಕ್ತರಾಗಿದ್ದರು ಎಂದು ಬೋವಿ ವಡ್ಡರ ಸಮಾಜದ ಮುಖಂಡ ನಾಗಪ್ಪ ಕಟ್ಟಿಮನಿ ಮಾತನಾಡಿದರು.

ನಗರದ ತಿಮ್ಮಾಪುರದ ಮುಖ್ಯರಸ್ತೆಯಲ್ಲಿರುವ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ನಾಮಫಲಕದ ಬಳಿಯ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸಿದ್ದರಾಮೇಶ್ವರರು ಕಲ್ಲು ಒಡೆಯುವ ಕಾಯಕದವರಾಗಿದ್ದರು.ಅಲ್ಲದೆ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಇವರೂ ಪ್ರಮುಖ ಶರಣರಾಗಿದ್ದರು.ಇವರು ಬರೆದ ವಚನಗಳು ಸಮಾಜದಲ್ಲಿನ ಮೂಢನಂಬಿಕೆ ಕಂದಾಚಾರಗಳನ್ನು ತೊಲಗಿಸುತ್ತವೆ ಎಂದರು.

Contact Your\'s Advertisement; 9902492681

ನಂತರ ಬೋವಿ ವಡ್ಡರ ಸಂಘದ ಅಧ್ಯಕ್ಷ ನಾಗಪ್ಪ ಜಾಲಳ್ಳಿ ಮಾತನಾಡಿ,ಶಿವಯೋಗಿ ಸಿದ್ದರಾಮೇಶ್ವರರ ವಚನಗಳು ನೇರ ನಿರುಷ್ಠರವಾಗಿವೆ.ಬಸವಾದಿ ಶರಣರ ಅನುಭವ ಮಂಟಪದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿದ್ದರಾಮೇಶ್ವರರ ಭಕ್ತಿಗೆ ಮೆಚ್ಚಿದ ಶ್ರೀ ಶೈಲ ಮಲ್ಲಿಕಾರ್ಜುನ ಇವರು ನದಿಗೆ ಹಾರುವಾಗ ಸ್ವತ ಮಲ್ಲಿಕಾರ್ಜುನನೆ ಪ್ರತ್ಯಕ್ಷವಾಗಿ ಉಳಿಸಿದ ಘಟನೆ ಜಗತ್ತಿಗೆ ತಿಳಿದಿದೆ.ಇಂತಹ ಮಹಾನ್ ಶರಣನ ಜಯಂತಿಯನ್ನು ಎಲ್ಲಾ ಸಮುದಾಯಗಳು ಆಚರಿಸುವಂತಾಗಬೇಕೆಂದರು.

ಕಾರ್ಯಕ್ರಮದ ಆರಂಭದಲ್ಲಿ ಸಿದ್ದರಾಮೇಶ್ವರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಜಯಘೋಷ ಹಾಕಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ ಗಫೂರ ನಗನೂರಿ,ಶೇಖ ಮಹಿಬೂಬ ಒಂಟಿ,ಈರಣ್ಣ ಕುಂಬಾರ,ಜೆಟ್ಟೆಪ್ಪ ಪೂಜಾರಿ, ದೇವು ಮಾಸ್ಟರ್,ಲಕ್ಷ್ಮಣ ಬೋವಿ,ತಿಮ್ಮಣ್ಣ ಪೂಜಾರಿ,ಹಣಮಂತ ದುಂಡಗಲ್,ಮೌನೇಶ ಗೊಬ್ಬೂರ,ಪರಶುರಾಮ ಯಾದವ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here