ಕಲಬುರಗಿ: ಸತತ ಬರಗಾಲದಿಂದ ಬೇಸತ್ತಿರುವ ರೈತರ ಪರಿಸ್ಥಿತಿಯು ಚಿಂತಾಜನಕವಾಗಿದೆ. ಮಳೆಯಿಂದ ಸ್ವಲ್ಪ ಭರವಸೆಯ ಮದ್ಯೆ ಬಿತ್ತನೆ ಮಾಡಿಕೊಂಡಿರುವ ರೈತರಿಗೆ ಜಿಲ್ಲಾಡಳಿತವು ಅತ್ಯಂತ ಮುತುವರ್ಜಿವಹಿಸಿ ಬೆಳೆಗೆ ಯೋಗ್ಯ ಬೆಲೆ ನಿಗದಿಪಡಿಸಬೇಕೆಂದು ರೈತ ಕೃಷಿಕಾರ್ಮಿಕರ ಸಂಘಟನೆ ಜಿಲ್ಲಾ ಅಧ್ಯಕ್ಷ ಗಣಪತರಾವ್ ಕೆ. ಮಾನೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಭೇಟಿ ಮನವಿ ಸಲ್ಲಿಸಿದರು.
ಸಾಲಬಾಧೆಯಿಂದ ನರಳುತ್ತಿದ್ದಾರೆ. ಆದ್ದರಿಂದ ಸತತ ಬರಗಾಲದಲ್ಲಿ ಬೆಳೆದ ತೊಗರಿಗೆ ಪ್ರತಿ ಕ್ವಿಂಟಲ್ ಗೆ 10 ಸಾವಿರಕ್ಕೆ ಹೆಚ್ಚಿಸಿ ಸರ್ಕಾರವು ಖರೀದಿಸಿ, ಬೆಳೆ ಖರೀದಿ ಮಿತಿಯನ್ನು ರದ್ದುಪಡಿಸಿ, ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆದು ಖರೀದಿಯಾದ ರೈತರಿಗೆ ಕೂಡಲೇ ಹಣ ಬಿಡುಗಡೆ ಮಾಡುವ ನೀಟ್ಟಿನಲ್ಲಿ ಕ್ರಮ ಕೈಗೊಳಬೇಕೆಂದು ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ ಅವರು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ವಿಶ್ವನಾಥ ಸಿಂಗೆ, ಮಲ್ಲಯ್ಯ ಗುತ್ತೇದರ್ ಸೇರಿದಂತೆ ಮುಂತಾದವರು ಇದ್ದರು.