ತಂಬಾಕು ಮಾರಾಟ ಅಂಗಡಿಗಳ ಮೇಲೆ ಕಾರ್ಯಾಚರಣೆ: 1100 ರೂ ದಂಡ

0
89

ಕಲಬುರಗಿ: ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಾಗೂ ಜಿಲ್ಲೆಯಲ್ಲಿ ತಂಬಾಕು ನಿಷೇಧಿಸಿರುವ ಪ್ರಯುಕ್ತ ಹಾಗೂ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನಗಳು ಮಾರಾಟ ಮಾಡುತ್ತಿದ ಅಂಗಡಿಯ ಮೇಲೆ ತಂಬಾಕು ನಿಯಂತ್ರಣ ಸಮೀಕ್ಷಾಧಿಕಾರಿಗಳ ತಂಡ ಸೇಡಂ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ದಾಳಿ ನಡೆಸಿ 1100 ರೂ. ದಂಡ ವಿಧಿಸಿದ್ದಾರೆ.

ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಷೇಧ ಕೋಶದಡಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶಿವಶರಣಪ್ಪ ನೇತೃತ್ವದಲ್ಲಿ ಸಮೀಕ್ಷಾಧಿಕಾರಿಗಳ ತಂಡವು ಇತ್ತೀಚೆಗೆ ಸೇಡಂ ಪಟ್ಟಣದ ಪ್ರಮುಖ ಪಾನ್ ಶಾಪ್, ಹೋಟೆಲ್ ಹಾಗೂ ಸಾರ್ವಜನಿಕ ಪ್ರದೇಶಗಳಗೆ ಭೇಟಿ ನೀಡಿ ಧೂಮಪಾನ ಮಾಡುತ್ತಿರುವ ಹಾಗೂ ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ನಿಯಮ ಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಅಂಗಡಿಗಳಿಗೆ ದಂಡ ವಿಧಿಸಿ, ಕೋಟ್ಪಾ ಕಾಯ್ದೆ 2013ರ ಉಲ್ಲಂಘನೆಯು ಕಂಡು ಬಂದ 14 ಅಂಗಡಿ, ಹೊಟೇಲ್‌ಗಳಿಗೆ ಏಳು ದಿನಗಳ ಕಾಲಾವಕಾಶ ನೀಡಿ ತಿಳುವಳಿಕೆ ಪತ್ರ/ನೋಟೀಸು ನೀಡಲಾಗಿದೆ.

Contact Your\'s Advertisement; 9902492681

ಕೋಟ್ಪಾ ಕಾಯ್ದೆ-2003 ರ ಸೆಕ್ಷನ್-04 ಕ್ಕೆ ಸಂಬಂಧಿಸಿದಂತೆ ಒಟ್ಟು 06 ಪ್ರಕರಣಗಳು ದಾಖಲಿಸಿ, 1100 ರೂ.ಗಳ ದಂಡ ವಿಧಿಸಲಾಯಿತು. ತಂಡವು ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಕಾಯ್ದೆಯ ನಿಯಮ ಪಾಲನೆ ಮಾಡುವಂತೆ ಮತ್ತು ಕೋಟ್ಪಾ ಕಾಯ್ದೆ-೨೦೦೩ರ ಸೆಕ್ಷನ್-೦೪ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ.

ಇದಲ್ಲದೆ ೧೮ ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದರು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಎಲ್ಲ ಪಾನ್‌ಶಾಪ್, ಹೋಟೇಲ್, ಬಾರ್ ಮತ್ತು ರೇಸ್ಟೋರೆಂಟ್‌ಗಳ ಮಾಲೀಕರು/ ಮಾರಾಟಗಾರರು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸೂಚಿಸಲಾಯಿತು.

ಈ ತಂಡದಲ್ಲಿ ಸೇಡಂ ತಾಲೂಕಿನ ಪುರಸಭೆಯ ಮುಖ್ಯಾಧಿಖಾರಿ ಶಿವುಕುಮಾರ,ಜಿಲ್ಲಾ ತಂಬಾಕು ನಿಷೇಧ ಕೋಶದ ಎಸ್.ಜೆ ಪಾಟೀಲ್, ರವಿ, ಮಹ್ಮದ ಮೈನೋದ್ದಿನ್ , ಎಸ್.ಐ., ಪುರಸಭೆ ಸೇಡಂ, ರಾಜಕುಮಾರ, ಅಶೋಕ ಜಾಧವ, ಸೋಮನಾಥ ಹಾಗೂ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here