ಕಲಬುರಗಿ: ನಗರದ ಖಾಜಾ ಕಾಲೋನಿಯ ಟೆನಿಪಾಲ್ ಶಾಲೆಯ ಹತ್ತಿರ ಯುವಕ ಓರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿರುವ ಘಟನೆ ನಿನ್ನ ಸಂಜೆ ನಡೆದಿದೆ.
ಖಾಜಾ ಕಾಲೋನಿ ನಿವಾಸಿಯಾದ ಸೈಯದ್ ಮುಲ್ಲಾ ಹಲ್ಲೆಗೊಳಗಾದ ಯುವ. ನಿನ್ನೆ ಸಂಜೆ ವೇಳೆಯಲ್ಲಿ ಕ್ಷುಲ್ಲಕ ಕಾರಣ ಯುವಕರ ಗುಂಪೊಂದು ಮಾರಕಾಸ್ತ್ರದಿಂದ ಹಲ್ಲೆ ನಡಿಸಿ ಕೊಲೆಗೆ ಯತ್ನಿಸಿ, ಪರಾರಿಯಾಗಿದ್ದಾರೆ.
ಸೈಯದ್ ಮುಲ್ಲಾ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡ ರೋಜಾ ಪೊಲೀಸರು ಹಲ್ಲೆ ನಡೆಸಿದ ಅನುಶಾ, ಮಹಮ್ಮದ್ ಫಿರೋಜ್ ಮತ್ತು ಹೈದರ ಮೂವರನ್ನು ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅಸ್ಲಂ ಪಾಶಾ ಅವರ ನೇತೃತ್ವದ ವೈಜನಾಥ, ಗೋಪಾಲ, ಮೋಹಸಿನ್, ಈರಣ್ಣ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸುವಲಿ ಯಶಸ್ವಿಯಾಗಿದ್ದಾರೆ.