ಮನೆ ಬಿಟ್ಟು ಬಾರದಂತೆ: ಡಾ. ಚಂದ್ರಶೇಖರ ಸುಬೇದಾರ ಸಾರ್ವಜನಿಕರಿಗೆ ಎಚ್ಚರಿಕೆ

0
69

ಶಹಾಪುರ: ಮಹಾಮಾರಿ ನೋವೆಲ್ಲಾ ಕೊರೋನಾ ವೈರಸ್ ಕೋವಿಡ್ -19 ಈಗಾಗಲೇ ಹಲವಾರು ದೇಶಗಳಿಗೆ ವ್ಯಾಪಿಸಿ ಮೂರನೇ ಹಂತ ತಲುಪಿದೆ.ಅದರಂತೆ ಕೂಡ ಭಾರತದಲ್ಲಿ ಮೂರನೇ ಹಂತ ತಲುಪಿದ್ದರಿಂದ ವ್ಯಾಪಕವಾಗಿ ಪ್ರಾಣಾಪಾಯಗಳು ಸಂಭವಿಸುವು ಸಂದರ್ಭಗಳು ಬಂದೊದಗಬಹುದು.

ಆದ್ದರಿಂದ ಸಾರ್ವಜನಿಕರು ಯಾರೂ ಅನಾವಶ್ಯಕವಾಗಿ ಮನೆ ಬಿಟ್ಟು ಹೊರಗಡೆ ಬಾರದೆ ೧೫ ದಿನಗಳ ಕಾಲ ಮನೆಯಲ್ಲೇ ಇದ್ದು ಮುಂಜಾಗೃತೆ ಕ್ರಮ ವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಖ್ಯಾತ ವೈದ್ಯರಾದ ಡಾ:ಚಂದ್ರಶೇಖರ ಸುಬೇದಾರ ಸಾರ್ವಜನಿಕರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಷ್ಟೆಲ್ಲ ಕಾನೂನಿನ ಆದೇಶ ಹೊರಡಿಸಿದರೂ ಕೂಡ ಜನರಲ್ಲಿ ಇನ್ನೂ ಅರಿವು ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಸ್ವಚ್ಛತೆ ಕಾಪಾಡಿಕೊಂಡು ಮನೆಯಲ್ಲಿರುವುದೇ ಕರೋನಾ ವೈರಸ್ ಗೆ ಮದ್ದು ಎಂದು ಸಲಹೆ ನೀಡಿದರು.

ಇಂತಹ ಸಮಯದಲ್ಲಿ ಆರೋಗ್ಯವೂ ಕೂಡ ಚೆನ್ನಾಗಿ ಕಾಪಾಡಿಕೊಳ್ಳಬೇಕು ಮದ್ಯ ಸೇವನೆ,ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರುವುದು ಉತ್ತಮ ಏಕೆಂದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಿ ಬಹುಬೇಗನೆ ಕರೋನಾ ವೈರಸ್ ತಗಲುವ ಸಂಭವವಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here