ಕಲಬುರಗಿ: ಏ. 5 ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ನಮ್ಮ ನಿಮ್ಮ ಮನೆಯ ದೀಪಗಳನ್ನು ಆರಿಸಿ, ಪ್ರತಿಯೊಬ್ಬರೂ ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ದೀಪ, ಟಾರ್ಚ, ಮೋಂಬತ್ತಿ, ಅಥವಾ ಮೊಬೈಲನ ಫ್ಲಾಶ ಲೈಟ್ ಬೆಳಗಿಸಿ ಸಂಪೂರ್ಣ ಭಾರತ ವಾಸಿಗಳೆಲ್ಲರು ಒಂದೆ ಎಂಬ ಸಾರ್ವತ್ರಿಕ ಸಂದೇಶ ಸಾರೋಣ, ನಿರ್ಮಲ ಮನಸ್ಸಿನಿಂದ ಭಾರತಾಂಬೆ ಯನ್ನು ಸ್ಮರಿಸೋಣ ಎಂದು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಕರೆ ನೀಡಿದ್ದಾರೆ.
ಈ ಕೊರೋನಾ ಎಂಬ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಪ್ರಧಾನಿಯವರ ಕರೆಗೆ ಓಗೋಡೋಣ ಮತ್ತು ಕೈಜೋಡಿಸೊಣ,ದೀಪ ಪ್ರಗತಿಯ ಸಂಕೇತ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಜನತೆಗೆ ಮನವಿ ಮಾಡಿದ್ದಾರೆ.
ನಮ್ಮ ಆತ್ಮಬಲ,ಆತ್ಮ ಸ್ಥೈರ್ಯ ಮತ್ತು ದೇಶಭಕ್ತಿಯನ್ನು ಮೆರೆಯೋಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ವಿಶ್ವಕ್ಕೆ ಭಾರತೀಯರ ಒಗಟ್ಟು ತೋರಿಸೋಣ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ .