ಸುರಪುರದಲ್ಲಿ ವಿವಿಧೆಡೆ ವಿಶೇಷವಾಗಿ ಬಸವ ಜಯಂತಿ ಆಚರಣೆ

0
25

ಸುರಪುರ: ನಗರದಲ್ಲಿನ ಅನೇಕ ಸಂಘ ಸಂಸ್ಥೆಗಳ ಮುಖಂಡರು ಲಾಕ್‌ಡೌನ್ ಕಾರಣದಿಂದ ಸರಳ ಮತ್ತು ವಿಶೇಷವಾಗಿ ಬಸವ ಜಯಂತಿ ಆಚರಿಸಿದರು.ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ನಗರದಲ್ಲಿನ ಬಡ ಜನತೆಯ ಮನೆ ಬಾಗಿಲಿಗೆ ಹೋಗಿ ಅಕ್ಕಿ ಬೇಳೆ ಬೆಲ್ಲ ಸಕ್ಕರೆ ಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಜಯಂತಿ ಆಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸೂಗುರೇಶ ವಾರದ್,ಶಿವುಕುಮಾರ್ ಕಲಕೇರಿ,ಚಂದ್ರು ಆವಂಟಿ,ಚಂದ್ರಶೇಖರ ಡೊಣೂರ,ಬಸವರಾಜ ಬೂದಿಹಾಳ, ಬಸಯ್ಯ ಸ್ವಾಮಿ,ಮಂಜುನಾಥ ಸ್ವಾಮಿ,ಆನಂದ ಮಡ್ಡಿ,ಸೂಗು ಸಜ್ಜನ್,ಮಲ್ಲಿಕಾರ್ಜುನ ಸುಬೇದಾರ್,ಭಾಗೇಶ್ ಕಾಳಗಿ,ಲಿಂಗರಾಜ ಶಾಬಾದಿ,ಮಂಜು ತಿಮ್ಮಾಪುರ ಇತರರಿದ್ದರು.

ಕರ್ನಾಟ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ): ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಮ್ಮ ಗೃಹ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಿದರು.ಮೊದಲಿಗೆ ಬಸವಣ್ಣನವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ನೆರವೇರಿಸಿದರು.ಈ ಸಂದರ್ಭದಲ್ಲಿ ವಕೀಲ ಅಪ್ಪಣ್ಣ ಗಾಯಕವಾಡ,ಧರ್ಮರಾಜ ಬಡಿಗೇರ್,ಮಹೇಶ ಯಾದಗಿರಿ,ಶಿವು ಗಾಯಕವಾಡ,ನಿರ್ಮಲಾ ಕ್ರಾಂತಿ ಇತರರಿದ್ದರು.

Contact Your\'s Advertisement; 9902492681

ಕರ್ನಾಟಕ ಯುವ ರಕ್ಷಣಾ ವೇದಿಕೆ: ನಗರದ ದೇವರಬಾವಿ ಬಳಿಯ ದೇವಸ್ಥಾನದಲ್ಲಿ ಬಸವ ಜಯಂತಿ ಆಚರಿಸಿದರು.ಬಸವಣ್ಣನವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ,ಸಿಹಿ ಅಂಚಿ ಆಚರಿಸಿದರು.ಈ ಸಂದರ್ಭದಲ್ಲಿ ಗುರುನಾಥ ರಡ್ಡಿ,ರಾಜಾ ಪಿಡ್ಡ ನಾಯಕ,ಸಚಿನ್ ಕುಮಾರ ನಾಯಕ,ಅನಿಲ್ ಕುಮಾರ,ಸಚಿನ್ ಕುಮಾರ,ಬಸವರಾಜ,ಆನಂದ,ತಿರುಪತಿ,ವೆಂಕಟೇಶ ಇತರರಿದ್ದರು.

ಪೇಠ ಅಮ್ಮಾಪುರದಲ್ಲಿ ಬಸವ ಜಯಂತಿ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ೮೮೭ನೇ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಕೋಳಿಹಾಳ,ಶರಣಪ್ಪ ಸಾಹುಕಾರ,ಆನಂದ ಸ್ವಾಮಿ,ಗ್ರಾ.ಪಂ ಸದಸ್ಯರಾದ ಮಲ್ಲಿಕಾರ್ಜುನ ರಡ್ಡಿ,ಖಾನೂಲಪ್ಪ ಮೂಕನೂರ,ಚಿದಾನಂದ ಯಳವಾರ,ಮುದ್ಕಪ್ಪ ಕೋಳಿಹಾಳ,ಬಸವರಾಜ ತನಿಖೆದಾರ್,ಗುರುಪಾದಪ್ಪ ಬೇವಿನಗಿಡ,ರಾಮರಡ್ಡಿ ಉಟ್ಕೂರ್,ವೆಂಕಟೇಶ ಬಡಿಗೇರ,ದೇವಿಂದ್ರಪ್ಪ ದೊಡ್ಮನಿ,ಹಣಮಂತ ಬಡಿಗೇರ,ಮಹೇಶ ಶಹಾಬಾದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here