ಕಲಬುರಗಿ: 2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಮತ್ತು ಕಡಲೆಯನ್ನು ರೈತರಿಂದ ಖರೀದಿಸುವ ಪ್ರಮಾಣವನ್ನು ಸರ್ಕಾರವು ಪರಿಷ್ಕರಿಸಿ ಹೆಚ್ಚಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
ಪರಿಷ್ಕøತ ಆದೇಶದಂತೆ ನೋಂದಾಯಿತ ರೈತರಿಂದ ಈಗಾಗಲೇ ಖರೀದಿಸಿರುವ ತೊಗರಿ ಪ್ರಮಾಣ ಸೇರಿದಂತೆ ಪ್ರತಿ ಎಕರೆಗೆ 7 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ತೊಗರಿಯನ್ನು ಖರೀದಿಸಲಾಗುತ್ತಿದೆ.
ಅದೇ ರೀತಿ ನೋಂದಾಯಿತ ರೈತರಿಂದ ಈಗಾಗಲೆ ಖರೀದಿಸಿರುವ ಕಡಲೆ ಪ್ರಮಾಣ ಸೇರಿದಂತೆ ಪ್ರತಿ ಎಕರೆಗೆ 5 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಕಡಲೆಯನ್ನು ಖರೀದಿಸಲಾಗುತ್ತಿದೆ.
ಈ ಹಿಂದೆ ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್ ತೊಗರಿ ಹಾಗೂ ಪ್ರತಿ ಎಕರೆಗೆ 3 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್ ಕಡಲೆ ಕಾಳು ಖರೀದಿಗೆ ಪ್ರಮಾಣ ನಿಗದಿಪಡಿಸಲಾಗಿತ್ತು.