ಕೊರೊನಾ ಎಫೆಕ್ಟ್ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ರಮ್ಜಾನ್ ಆಚರಣೆ

0
55

ಸುರಪುರ: ಕೊರೊನಾ ಎಫೆಕ್ಟ್‌ನಿಂದಾಗಿ ಈಬಾರಿಯ ರಮ್ಜಾನ್ ಹಬ್ಬವನ್ನು ತಾಲೂಕಿನ ಮುಸ್ಲಿಂ ಬಾಂಧವರು ಸರಳವಾಗಿ ಆಚರಣೆ ನಡೆಸಿದರು.ಸರಕಾರ ಆದೇಶ ಹೊರಡಿಸಿ ಯಾವುದೆ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸೂಚಿಸಲಾಗಿತ್ತು.ಅಲ್ಲದೆ ಗುಂಪಾಗಿ ಸೇರದಂತೆಯು ಮತ್ತು ಬೇರೊಬ್ಬರ ಮನೆಗಳಿಗೂ ಹೋಗದಂತೆ ಮುಂಜಾಗ್ರತೆ ಕೈಗೊಳ್ಳಲು ತಿಳಿಸಲಾಗಿತ್ತು.

ಅದರಂತೆ ಮುಸ್ಲಿಂ ಬಾಂಧವರು ಈದ್ಗಾಗೆ ಹೋಗದೆ ತಮ್ಮ ತಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಬಂಧು ಬಾಂಧವರಿಗೂ ಮನೆಯಿಂದಲೆ ಶುಭ ಕೋರಿದರು.

Contact Your\'s Advertisement; 9902492681

ಈಬಾರಿಯ ಹಬ್ಬದ ಕುರಿತು ಟಿಪ್ಪು ಸುಲ್ತಾನ ಯುವಕ ಸಂಘದ ಅಧ್ಯಕ್ಷ ಹರ್ಷದ್ ದಖನಿ ಪತ್ರಿಕೆಯೊಂದಿಗೆ ಮಾತನಾಡಿ,ಈ ವರ್ಷ ಕೊರೊನಾ ವೈರಸ್ ಮಾರಿಯಾಗಿ ಜಗತ್ತಿನ ಎಲ್ಲಾ ಜನರಿಗೂ ತಿವ್ರವಾದ ತೊಂದರೆಯನ್ನುಂಟು ಮಾಡಿದೆ.ನಮ್ಮ ದೇಶದಲ್ಲಿಯೂ ಕೊರೊನ ಅಟ್ಟಹಾಸ ಮೆರೆಯುತ್ತಿದ್ದು,ಸರಕಾರ ಈಬಾರಿಯ ಹಬ್ಬವನ್ನು ಸರಳವಾಗಿ ಆಚರಿಸುವ ಸೂಚನೆ ನಿಡಿದಂತೆ ಎಲ್ಲಾ ಮುಸ್ಲಿಂ ಬಾಂಧವರುಕೂಡ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ.ನಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ಕೊರೊನಾ ವೈರಸ್ ಬೇಗ ನಾಶವಾಗಿ ಮಾನವ ಜನಾಂಗಕ್ಕೆ ಒಳಿತನ್ನುಂಟು ಮಾಡಲೆಂದು ಅಲ್ಲಾನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ನಮ್ಮ ಸುರಪುರದಲ್ಲಿ ಪ್ರತಿ ವರ್ಷ ರಮ್ಜಾನ್ ಹಬ್ಬವನ್ನು ಸರ್ವ ಧರ್ಮದ ಸೌಹಾರ್ಧತೆಯಿಂದ ಆಚರಿಸಲಾಗುತ್ತಿತ್ತು.ಸುರಪುರ ಅರಸು ಮನೆತನದವರು ರಮ್ಜಾನ್ ಹಬ್ಬದ ದಿನ ನಮ್ಮ ಮೌಲ್ವಿಯವರು ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಪಲ್ಲಕ್ಕಿಯಲ್ಲಿ ಹೊತ್ತು ತಂದನಂತರ ದರಬಾರದಲ್ಲಿ ಅವರಿಗೆ ವೀಳೆದೆಲೆ ಅಡಿಕೆ ನೀಡಿ ಸತ್ಕರಿಸುವ ಮೂಲಕ ಹಬ್ಬದ ಶುಭ ಕೋರುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಆದರೆ ಈಬಾರಿ ನಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸುವುದರಿಂದ ಈ ಸಂಪ್ರಾಯ ನೆರವೇರುತ್ತಿಲ್ಲ.

ಇದು ನಮ್ಮ ಸುರಪುರ ಅರಸರ ಸೌಹಾರ್ಧತೆಯ ಸಂಕೇತವಾಗಿತ್ತು ಎಂದು ಹಿಂದಿನ ಆಚರಣೆಯ ಮೆಲಕು ಹಾಕಿದರು.ಮಾಜಿ ಶಾಸಕರಾಗಿದ್ದ ರಾಜಾ ಕುಮಾರ ನಾಯಕರ ಕಾಲದಿಂದಲೂ ಇಂದಿನ ವರೆಗೂ ರೋಜಾ ತಿಂಗಳಿನಲ್ಲಿ ನಗರದ ಎಲ್ಲಾ ಮಸೀದಿಗಳಿಗೆ ಹೋಗಿ ಖರ್ಜೂರ ಹಂಚುತ್ತಿದ್ದರು.ಈಬಾರಿ ಇದೂ ಕೂಡ ನೆರವೇರುತ್ತಿಲ್ಲ ಎಂದು ವಿವರಿಸಿದರು.

ನಗರದ ಝಂಡದಕೇರಾ ಮತ್ತು ರಂಗಂಪೇಟೆಯಲ್ಲಿನ ಈದ್ಗಾ ಮೈದಾನಗಳ ಬಳಿಯಲ್ಲಿ ಮುಂಜಾಗ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here