ಅಮೇರಿಕಾ ಜನವಿರೋಧಿ ನೀತಿ ವಿರುದ್ಧ ಎಸ್.ಯು.ಸಿ.ಐ ಪ್ರತಿಭಟನೆ

0
85

ಶಹಾಬಾದ: ಡೊನಾಲ್ಡ್ ಟ್ರಂಪ್‍ನ ಫ್ಯಾಸೀವಾದಿ ದುರಾಡಳಿತವನ್ನು ಖಂಡಿಸಿ ಹೋರಾಟ ಮಾಡುತ್ತಿರುವ ಅಮೇರಿಕಾದ ಜನತೆಯೊಂದಿಗೆ ನಾವಿದ್ದೆವೆ ಎಂದು ಬೆಂಬಲಿಸಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಅಮೇರಿಕಾ ಸಾಮ್ರಾಜ್ಯಶಾಹಿಗಳ ಆಡಳಿತವು ಹೇರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ ಐತಿಹಾಸಿಕ ಹೋರಾಟವನ್ನು ಮಾಡುತ್ತಿರುವ ಅಮೇರಿಕಾದ ಹೋರಾಟನಿರತ ಜನತೆಯೊಂದಿಗೆ ನಾವಿದ್ದೆವೆ.

Contact Your\'s Advertisement; 9902492681

ಜನತೆಯಲ್ಲಿ ಹುದುಗಿದ್ದ ಸಂಕಟ, ಆಕ್ರೋಶವು ಜ್ವಾಲಾಮುಖಿಯಂತೆ ಸ್ಪೋಟಗೊಂಡಿದೆ. ಇದು ಕೇವಲ ವರ್ಣಭೇದ ನೀತಿಯ ವಿರುದ್ದವಲ್ಲದೇ ಅಮೇರಿಕಾ ಸಾಮ್ರಾಜ್ಯಶಾಹಿ ಆಳ್ವಿಕರ ಜನವಿರೋಧಿ ನೀತಿಗಳ ವಿರುದ್ದ ಹೋರಾಟ ನಡೆಯುತ್ತಿದೆ. ಅಮೇರಿಕಾದಲ್ಲಿ ನಿರುದ್ಯೋಗ, ಕೆಲಸದಿಂದ ವಜಾ, ಹಸಿವು ಮತ್ತು ಕೋವಿಡ್-19 ರೋಗವನ್ನು ತಡಗಟ್ಟವಲ್ಲಿ ವಿಫಲಗೊಂಡಿದ್ದರಿಂದ ಲಕ್ಷಾಂತರ ಜನತೆಯ ಸಾವಿಗೆ ಕಾರಣವಾದ ಟ್ರಂಪ್ ರವರ ದುರಾಡಳಿತ ವಿರೋಧಿಸಿ ಜನರು ರಸ್ತೆಗೆ ಇಳಿದಿದ್ದಾರೆ.

ಈ ಹೋರಾಟದಲ್ಲಿ ಗಮನಿಸಬೇಕಾದ ಅಂಶವೆಂದರೆ, ಧರ್ಮ, ವರ್ಣಭೇದ ಮರೆತು ಅಮೇರಿಕಾದ ಎಲ್ಲಾ ವಿಭಾಗದ ಜನರು ಒಗ್ಗಟ್ಟಾಗಿ ಹೋರಾಟಕ್ಕೀಳಿದಿದ್ದಾರೆ. ಇದು ನಮಗೆ ಅಮೇರಿಕಾ ಸಾಮ್ರಾಜ್ಯಶಾಹಿಗಳ ಬುಡವನ್ನೇ ಅಲುಗಾಡಿಸಿದ “ಅಕ್ಯುಪೈ ವಾಲ್‍ಸ್ಟ್ರೀಟ್” ಹೋರಾಟವನ್ನು ನೆನಪಿಸುತ್ತದೆ.

ಈ ಹೋರಾಟವು ಸಾಮ್ರಜ್ಯಶಾಹಿ-ಬಂಡವಾಳಶಾಹಿಗಳ ಶೋಷಣೆಯ ವಿರುದ್ದ ಶೋಷಿತ, ದಮನಿತ ಜನರಿಗೆ ಸ್ಪೂರ್ತಿ ನೀಡುತ್ತದೆ. ಹಾಗೂ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷವು ಅಮೇರಿಕಾದ ಜನರು ಈ ಹೋರಾಟದಲ್ಲಿ ಯಶಸ್ವಿಯಾಗಲೆಂದು ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು. ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಕಾರ್ಯದರ್ಶಿ ಗಣಪತರಾವ ಮಾನೆ, ಜಗನ್ನಾಥ.ಎಸ್.ಹೆಚ್,ಶಿವಕುಮಾರ ಕುಸಾಳೆ,ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here