ಕೊರೊನಾ ಸೊಂಕಿನ ವಿರುದ್ಧ ಹೋರಾಟವಿರಲಿ ಸೊಂಕಿತರ ವಿರುಧ್ಧ ಬೇಡ-ಡಿಸಿ ಕೂರ್ಮರಾವ್

0
61

ಸುರಪುರ: ಇಲ್ಲಿಯವರೆಗೆ ನಾವೆಲ್ಲರು ಕೊರೊನಾ ಸೊಂಕಿನ ವಿರುಧ್ಧ ಹೋರಾಟ ಮಾಡಿದ್ದೇವೆ,ಕೊರೊನಾ ಸೊಂಕಿತರ ವಿರುಧ್ಧ ನಮ್ಮ ಹೋರಾಟ ಅಲ್ಲ. ಇಲ್ಲಿಯ ವರೆಗೆ ಯಾದಗಿರಿ ಜಿಲ್ಲೆಗೆ ಸುಮಾರು 15 ಸಾವಿರ ಜನರು ಹೋರಾ ರಾಜ್ಯದಿಂದ ಬಂದವರನ್ನು 224 ಕ್ವಾರಂಟೈನ್ ಕೇಂದ್ರದಲ್ಲಿ ಉಳಿಸಿ ಉಪಚರಿಸಲಾಗಿತ್ತು.ಆದರೆ ಈಗ ಸರಕಾರದ ಆದೇಶದಂತೆ ಎಲ್ಲರನ್ನು ಬಿಡುಗಡೆಗೊಳಿಸಿ ಅವರ ಮನೆಗಳಲ್ಲಿಯೆ ಪ್ರತ್ಯೇಕವಾಗಿ ಉಳಿದುಕೊಳ್ಳಲು ತಿಳಿಸಲಾಗಿದೆ.ಗೃಹ ದಿಗ್ಬಂಧನಕ್ಕೊಳಗಾದವರ ನಿಗಾ ವಹಿಸಲು ಗ್ರಾಮೀಣ ಮಟ್ಟದ ತಂಡ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದರು.

ನಗರದ ಕುಂಬಾರಪೇಟೆಯ ಪ್ರೇರಣಾ ಶಾಲಾ ಸಭಾಂಗಣದಲ್ಲಿ ಕ್ವಾರಂಟೈನ್ ವಾಚ್ ಯಾಪ್ ಕುರಿತಾದ ಮಾಹಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಹೋಮ್ ಕ್ವಾರಂಟೈನಲ್ಲಿರುವವರನ್ನು ಸ್ಥಳಿಯ ತಂಡ ಗಮನಿಸುವ ಜೊತೆಗೆ ಅವರ ಮಾಹಿತಿಯನ್ನು ಈ ಯಾಪ್‍ಲ್ಲಿ ಅಳವಡಿಸುವುದರಿಂದ ಅವರು ಮನೆಯಿಂದ ಹೊರ ಬರದಂತೆ ಗಮನಿಸಲು ಯಾಪ್ ಕೆಲಸ ಮಾಡುತ್ತದೆ ಎಂದರು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ರಾಜುಗೌಡ ಮಾತನಾಡಿ,ಇಲ್ಲಿಯರೆಗೆ ನಮ್ಮ ಜಿಲ್ಲೆಯ ಯಾವುದೇ ಜನರಲ್ಲಿ ಕೊರೊನಾ ಸೊಂಕು ಬಂದಿಲ್ಲ,ಎಲ್ಲಾ 285 ಜನರು ಕೂಡ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.ಅವರಿಗೂ ಕೂಡ ಆಪ್ತವಾಗಿ ಕಂಡು ಕ್ವಾರಂಟೈನಲ್ಲಿರಿಸಿ ನೋಡಿಕೊಳ್ಳಲಾಗಿದೆ.ಜಿಲ್ಲೆಯ ಜನರಲ್ಲಿ ಕೊರೊನಾ ಹರಡದಂತೆ ಕಾಪಾಡುವಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿಯವರು,ಜಿಲ್ಲಾ ಪಂಚಾಯತ್ ಸಿಇಒ ಹಾಗು ಪೊಲೀಸ್ ಅಧಿಕ್ಷಕರ ಸೇವೆ ದೊಡ್ಡದಿದೆ.ಜೊತೆಗೆ ಎರಡು ತಾಲೂಕುಗಳ ತಹಸೀಲ್ದಾರರು ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್ ಮಾತನಾಡಿ,ಇಡೀ ಜಿಲ್ಲೆಯ ಜನರನ್ನು ಕೊರೊನಾದಿಂದ ಕಾಪಾಡಿದ ಶ್ರೇಯಸ್ಸು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಸಲ್ಲುತ್ತದೆ.ಇವರೆಲ್ಲರ ಶ್ರಮವನ್ನು ನಾವೆಲ್ಲರು ಸ್ಮರಿಸಬೇಕಿದೆ.ಮುಂದೆಯೂ ಜಿಲ್ಲೆಗೆ ಕೊರೊನಾ ವೈರಸ್ ತಡೆಯುವಲ್ಲಿ ಎಲ್ಲರೂ ಮುಂಜಾಗೃತೆ ವಹಿಸೋಣ ಎಂದರು.ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆಯಿಂದ ನೀಡಲಾಗುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ವಿತರಿಸಲಾಯಿತು.

ಸಭೆಯ ವೇದಿಕೆ ಮೇಲೆ ಜಿಲ್ಲಾ ಪೊಲೀಸ್ ಅಧಿಕ್ಷಕ ರುಶಿಕೇಶ ಭಗವಾನ್ ಸೋನೆವಾಣೆ,ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜಸ್ವಾಮಿ ಸ್ಥಾವರಮಠ,ಮರಿಲಿಂಗಪ್ಪ ಕರ್ನಾಳ ಮುಖಂಡರಾದ ಭೀಮಣ್ಣ ಬೇವಿನಾಳ,ದೊಡ್ಡ ದೇಸಾಯಿ ದೇವರಗೋನಾಲ ಇದ್ದರು.ಸಭೆಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ,ತಹಸೀಲ್ಧಾರ ನಿಂಗಣ್ಣ ಬಿರಾದಾರ್,ಹುಣಸಗಿ ತಹಸೀಲ್ದಾರ ವಿನಯಕುಮಾರ ಪಾಟೀಲ್,ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ,ಟಿಹೆಚ್‍ಒ ಡಾ:ಆರ್.ವಿ.ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here