ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾಲಿಕಯ್ಯ ಗುತ್ತೇದಾರ್ ಔಟ್ˌ ಸುನೀಲ್ ವಲ್ಶಾಪುರೆ ಇನ್?

0
1336

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ 4 ಸ್ಥಾನ ಲಭ್ಶವಿದ್ದುˌ ಹೈಕ ಭಾಗದ ಸುನೀಲ್ ವಲ್ಶಾಪುರೆ ಹೆಸರು ಫೈನಲ್ ಆಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚೆಗೆ ಸಭೆ ಸೇರಿದ್ದ ಬಿಜೆಪಿ ಕೋರ್ ಕಮೀಟಿ ಹೈಕ ಭಾಗದಿಂದ ಸುನೀಲ್ ವಲ್ಶಾಪುರೆ ಹೆಸರು ಫೈನಲ್ ಮಾಡಲಾಗಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಪರಿಷತ್ ಸ್ಥಾನಕ್ಕೆ ಹೈಕ ಭಾಗಕ್ಕೆ ಆಧ್ಶತೆ ನೀಡಬೇಕು ಎಂಬ ಬೇಡಿಕೆ ಪ್ರಭಲವಾಗಿ ಕೇಳಿ ಬಂದಿತ್ತು. ಅಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರಯತ್ನಿಸಿದ ಪ್ರಮುಖರು ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದರು.

Contact Your\'s Advertisement; 9902492681

ಅದರಲ್ಲೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ತಮಗೆ ವಿಧಾನ ಪರಿಷತ್ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸ ಹೊಂದಿದ್ದರು. ವಿಧಾನ ಪರಿಷತ್ ಟಿಕೆಟ್ ವಲ್ಶಾಪುರೆಗೆ ನೀಡುವಂತೆ ಬೆಂಗಳೂರಿಗೆ ನಿಯೋಗ ಹೋಗಿದ್ದವರಿಗೆ ಫೋನ್ ಮಾಡಿ ರೇಗಿದ್ದರು. ಸಂಸದ ಉಮೇಶ್ ಜಾಧವ್ ಅವರಿಗೂ ಏನ್ರೀ ನನ್ನ ಬಿಟ್ಟು ನಿಯೋಗ ಹೋಗ್ತೀರಾ? ಎಂದು ಅವಾಜ್ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ಮಾಲೀಕಯ್ಯ ಗುತ್ತೇದಾರ್ ಅವರ ಜೊತೆಯೂ ಸಂಸದ ಜಾಧವ್ ಬಿಜೆಪಿ ರಾಜ್ಶ ನಾಯಕರಿಗೆ ಭೇಟಿ ಮಾಡಿ ಮಾಲೀಕಯ್ಯ ಗುತ್ತೇದಾರ್ ಗೆ ಸ್ಥಾನ ನೀಡುವಂತೆ ಕೋರಿದ್ದರು.

ಸಂಸದ ಡಾ.ಉಮೇಶ್ ಜಾಧವ್ ಅವರ ಮಗ ಡಾ.ಅವಿನಾಶ್ ಜಾಧವ್ ಅವರಿಗೆ ಚಿಂಚೋಳಿ ವಿಧಾನಸಭೆ ಟಿಕೆಟ್ ಬಿಟ್ಟುಕೊಡುವಂತೆ, ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕೊಟ್ಟಿದ್ದರು ಎನ್ನಲಾಗುತ್ತಿದೆ. ಅದನ್ನು ಬಿಎಸ್ ವೈ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಲ್ಶಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲ ನಾಯಕರೆನಿಸಿಕೊಂಡಿರುವ ಗುತ್ತೇದಾರ ಅವರಿಗೆ ಹಿನ್ನಡೆಯಾದಂತಾಗಲಿದೆ. ಒಂದುವೇಳೆ ಮಾಲೀಕಯ್ಯ ಗುತ್ತೇದಾರ ಅವರಿಗೆ ಟಿಕೆಟ್ ಸಿಗದಿದ್ದಲ್ಲಿ ಅವರು ಸುಮ್ಮನೆ ಕೂಡುವುದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಇದೆಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here