ಕಲಬುರಗಿ: ಸೋಮವಾರ 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ ಹಿನ್ನೆಲೆ ಅವರನ್ನು ಕರೆತರಲು ಹೋದಾಗ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ವಾಹನಗಳ ಮೇಲೆ ತಾಂಡಾದ ಜನರು ಕಲ್ಲು ತೂರಾಟ ಮಾಡಿದ ವೇಳೆ, ಕೆಲ ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿ ಸೇರಿ ಪೊಲೀಸ್ ವಾಹನಗಳು ಗಾಜು ಪುಡಿಗೊಳಿಸಿ ಗಾಯಗೊಂಡಿದ್ದರು. ಇದೇ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದಲ್ಲಿ ಮತ್ತೆ 25 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
4 ತಿಂಗಳ ಬಾಣಂತಿ ಸೇರಿ ಎಲ್ಲ ಸೋಂಕಿತರನ್ನು ಮನವೊಲಿಸಿ ಐಸೋಲೇಷನ್ ಗೆ ದಾಖಲಿಸುವಲ್ಲಿ ಅಧಿಕಾರಿಗಳು ಮಂಗಳವಾರ ಯಶಸ್ವಿಯಾಗಿದೆ.
ಮತ್ತೆ 25 ಜನ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ನೇತೃತ್ವದ 4 ಮೀಸಲು ಪಡೆ ತುಕಡಿ ಸೇರಿ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಾಯದೊಂದಿಗೆ ತಾಂಡಾದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಗಲಾಟೆ ಇಲ್ಲದೇ ಎಲ್ಲರನ್ನೂ ಐಸೋಲೇಷನ್ ಕರೆದೊಯ್ಯಲು ಯಶಸ್ವಿಯಾಗಿದ್ದಾರೆ.