ಶಹಾಪುರ: ದೇಶದ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಬಡ ಕುಟುಂಬಗಳು ಸೂರು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವುದರಿಂದ ಅಂಥವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮುಖಂಡರಾದ ಎಂ.ಎಸ್. ಸಾಗರ ಒತ್ತಾಯಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸವಾದಿ ಜಿಲ್ಲಾ ಸಂಘಟನಾ ವತಿಯಿಂದ ಶಹಾಪುರ ತಹಸೀಲ್ದಾರರ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕೈಯಲ್ಲಿರುವ ಕೆಲಸ ಕಳೆದುಕೊಂಡು ಅವರ ಬದುಕು ಬೀದಿ ಪಾಲಾಗಿದೆ ಕಾಯಿಲೆಗಳಿಗೆ ತುತ್ತಾಗಿ ಬೀದಿಯಲ್ಲಿ ಅದೆಷ್ಟೋ ಜನ ಸಾವಿಗೀಡಾಗಿದ್ದಾರೆ ಈ ವಿಷಯವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರಿಗೆ ಸೂಕ್ತವಾದ ಸಹಾಯ ನೀಡಬೇಕು ಎಂದು ಮಲ್ಲಯ್ಯ ಪೊಲಂಪಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಗುಲಾಂ ಹುಸೇನ್,ಜೈಲಾಲ್ ತೋಟದ ಮನಿ,ರಂಗಮ್ಮ ಕಟ್ಟಿಮನಿ, ಮಲ್ಲಯ್ಯ ಕಟ್ಟಿಮನಿ,ಭೀಮಣ್ಣ ನಾಯ್ಕೋಡಿ ನಿಂಗಣ್ಣ ನಾಟೇಕರ್, ವಿಜಯ್ ರಾಠೋಡ್, ಶಿವಪ್ಪ ಪೂಜಾರಿ, ಹಣಮಂತ್ರಾಯಗೌಡ, ಮಾಳಪ್ಪ ಪೂಜಾರಿ, ಹಾಗೂ ಇತರರು ಉಪಸ್ಥಿತರಿದ್ದರು.