ಕಲಬುರಗಿ: ಮಹಾನಗರ ಪಾಲಿಕೆಯವತಿಯಿಂದ 2020-21ನೇ ಸಾಲಿನಲ್ಲಿ ಡೇ-ನಲ್ಮ್ ಯೋಜನೆಯ ಉತ್ತರ-ಸಿ.ಎಲ್.ಎಫ್ ವೈಯಕ್ತಿಕ ಸಾಲ ಹಾಗೂ ಗುಂಪು ಸಾಲ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ತಿಳಿಸಿದ್ದಾರೆ.
2020ರ ಜೂನ್ 29ರಿಂದ ಜುಲೈ 10ರವರೆಗೆ ಮಹಾನಗರ ಪಾಲಿಕೆ ಆವಕ ಶಾಖೆಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿ.ಪಿ.ಎಲ್.ಕಾರ್ಡ್, ಆಧಾರ ಕಾರ್ಡ್, ಐಡಿ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದ್ವಿಪ್ರತಿಗಳನ್ನು ಸಲ್ಲಿಸಬೇಕು. ಅರ್ಜಿದಾರರು ನಗರ ಪ್ರದೇಶದ ನಿವಾಸಿಯಾಗಿರಬೇಕು.
ಅರ್ಜಿದಾರರ ಕುಟುಂಬದಲ್ಲಿ ಸ್ವ-ಸಹಾಯ ಗುಂಪಿನ ಸದಸ್ಯರಾಗಿರಬೇಕು. ಬೀದಿ ವ್ಯಾಪಾರಿಗಳು,ಅಂಗವಿಕಲರು, ಮಂಗಳಮುಖಿಯರು ಹಾಗೂ ವಿಧವೆಯರಿಗೆ ಆದ್ಯತೆÉ ನೀಡಲಾಗುತ್ತದೆ. 18ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಕಲಬುರಗಿ ಮಹಾನಗರ ಪಾಲಿಕೆಯ ಉತ್ತರ ವಲಯದ ವಾರ್ಡ್ 1ರಿಂದ 30 ಹಾಗೂ 32ರ ವ್ಯಾಪ್ತಿಯಲ್ಲಿ ವಾಸಿಸುವವರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.