ಸುರಪುರ: ಇಂದು ಕೊರೊನಾ ವೈರಸ್ ಎಲ್ಲೆಡೆ ಹರಡಿರುವ ಸಂದರ್ಭದಲ್ಲಿ ಕೊರೊನಾ ಸೈನಿಕರಂತೆ ನಿತ್ಯ ನಿರಂತರ ಸೇವೆ ಮಾಡುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಿರಬೇಕೆಂದು ಅಜೀಂ ಪ್ರೇಮ್ ಜಿ ಪೌಂಡೇಶನ್ ಸಂಪನ್ಮೂಲ ವ್ಯಕ್ತಿ ರಂಗನಾಥ ಬೆನಕಟ್ಟಿ ತಿಳಿಸಿದರು.
ಅಜೀಂ ಪ್ರೇಮ್ ಜಿ ಪೌಂಡೇಶನ್ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುರಪುರ ಮತ್ತು ಹುಣಸಗಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಥರ್ಮಲ್ ಸ್ಕ್ಯಾನರ್ ಮತ್ತು ಪಲ್ಸ್ ಆಕ್ಸಿ ಮೀಟರ್ ವಿತರಣೆ ಹಾಗು ಇವುಗಳ ಬಳಕೆಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಆಶಾ ಕಾರ್ಯಕರ್ತೆಯರು ನಿತ್ಯವು ಎಲ್ಲೆಡೆ ಸಂಚರಿಸಿ ಪ್ರತಿ ಮನೆಗಳಿಗೂ ಭೇಟಿ ನೀಡುವ ಮೂಲಕ ಸೇವೆ ಮಾಡುತ್ತಾರೆ.
ಇದರಿಂದ ಅವರಲ್ಲೂ ಸೊಂಕು ಹರಡುವ ಸಾಧ್ಯತೆ ಇರುವುದರಿಂದ ಅವರಿಗೆ ಸಹಾಯವಾಗಲೆಂದು ಪೌಂಡೇಶನ್ ವತಿಯಿಂದ ಥರ್ಮಲ್ ಸ್ಕ್ಯಾನರ್ ಹಾಗು ಆಕ್ಸಿ ಮೀಟರ್ ವಿತರಿಸಲಾಗುತ್ತಿದೆ.ಇದರಿಂದ ಆಶಾ ಕಾರ್ಯಕರ್ತೆಯರು ಆಗಾಗ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು.ಅಲ್ಲದೆ ತಾವು ಭೇಟಿ ನೀಡಿದ ಮನೆಗಳಲ್ಲಿನ ಜನರ ಆರೋಗ್ಯವನ್ನು ಪರೀಕ್ಷಿಸಿ ಅವರ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಕಂಡಲ್ಲಿ ತಕ್ಷಣ ಸರಕಾರಿ ಆಸ್ಪತ್ರೆಗೆ ಕಳುಹಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಪಿಎಫ್‌ನ ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಕುಮಾರ್,ಚಂದ್ರಕಾಂತ ರೆಡ್ಡಿ,ಮಲ್ಲೇಶ ವಗ್ಗಾರ ಹಾಗು ಆರೋಗ್ಯ ಇಲಾಖೆಯ ಸಿಬ್ಬಂದಿ ಬಿಹೆಚ್‌ಇಒಗಳಾದ ನಿಂಗಮ್ಮ ,ಮಲ್ಲಪ್ಪ ಹಾಗು ಆಶಾ ಕಾರ್ಯಕರ್ತೆಯರ ಮೆಂಟರ್ ಸಂಗೀತಾ ವೈದ್ಯಾಧಿಕಾರಿಗಳಾದ ಅಕ್ಕಮಹಾದೇವಿ ಹಾಗು ಅನೇಕ ಜನ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.