ಅಫಜಲಪುರ: ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕೊವಿಡ್-19 ವಾರಿಯರ್ಸ್ ಎಂದು ಪರಿಗಣಿಸಿ ಆರೋಗ್ಯ ವಿಮೆ ಸೇರಿದಂತೆ ಸರಕಾರದ ಇತರ ಸೌಲತ್ತುಗಳನ್ನು ನೀಡಬೇಕೆಂದು ಒತ್ತಾಯಿಸಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ತಾಲೂಕ ಸಂಘದವತಿಯಿಂದ ತಹಶೀಲ್ದಾರ ಯಲ್ಲಪ್ಪ ಸುಬೇದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ತಾಲೂಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಮಲ್ಲು ಕ್ಷತ್ರಿ ಮಾತನಾಡಿ ಗುಲಬರ್ಗಾ ವಿದ್ಯುತ್ ಶಕ್ತಿ ಕಂಪನಿ ವ್ಯಾಪ್ತಿಯಲ್ಲಿ 987 ಜೀವಿಪಿಗಳು ಸುಮಾರು17 ವರ್ಷಗಳಿಂದ ಸೇವಾ ಭದ್ರತೆ ಕನಿಷ್ಠ ಸೌಲಭ್ಯಗಳಿಲ್ಲದೆ ಕನಿಷ್ಠ ವೇತನದಲ್ಲಿ ನಿಗಮದ ಏಳಿಗಾಗಿ ಶ್ರಮಿಸುತ್ತಿದ್ದಾರೆ.ಇತ್ತೀಚೆಗೆ ಕೊರಾನಾ ಮಹಾಮಾರಿ ವೈರಸ್ ಅಟ್ಟಹಾಸಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಭಯಾನಕ ವಾತಾವರದಲ್ಲಿಯೂ ಕೂಡ ಜೀವದ ಹಂಗು ತೊರೆದು ಪ್ರತಿ ಮನೆ ಮನೆಗಳಿಗೆ ತೆರಳಿ ಬಿಲ್ ವಸೂಲಾತಿ ಅಲ್ಲದೆ ಇನ್ನಿತರ ಕೆಲಸ ಕಾರ್ಯಗಳು ಕೂಡ ಮಾಡುತ್ತಿದ್ದೇವೆ.
ಇತ್ತೀಚೆಗೆ ನಾಗಮಂಗಲ ಉಪವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಬಿಲ್ ವಸೂಲಾತಿ ಮಾಡುವ ಸಂದರ್ಭದಲ್ಲಿ ಎಸ್.ರಮೇಶ ಎಂಬುವವರು ಕೊರಾನಾ ಪಾಸಿಟಿವ್ ಬಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಸರಕಾರ ಇವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ.ಇಂಥಹ ಭಯಾನಕ ಪರಸ್ಥತಿಯಲ್ಲಿ ಕಾರ್ಯನಿವ೮ಹಿಸುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕೊವಿಡ್- 19 ವಾರಿಯರ್ಸ್ ಎಂದು ಪರಿಗಣಿಸಿ ಆರೋಗ್ಯ ವಿಮೆ ಸೇರಿದಂತೆ ಸರಕಾರದ ಇತರ ಸೌಲತ್ತು ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳಾದ ಮಲ್ಲೇಶಿ ಕ್ಷತ್ರಿ,ವಿಕಾಸ ಉಡಚಾಣ,ಚಂದ್ರಕಾಂತ ಮಣೂರ, ಪರಶುರಾಮ ಕರಜಗಿ,ಲಕ್ಷ್ಮಣ ಗೌರ್,ಗುರುಪಾದ ಬಳೂರ್ಗಿ,ಮಹಾಂತೇಶ ಕಲ್ಲೂರ,ಹಣಮಂತ ಆನೂರ ಇದ್ದರು.