ಸುಲಿಗೆಕೋರ ಆನ್‌ಲೈನ್ ಶಿಕ್ಷಣ ಕೈಬಿಡಿ

0
73

ದೇಶದೆಲ್ಲೆಡೆಯಂತೆ ನಮ್ಮ ರಾಜ್ಯದ ಜನರಲ್ಲಿ ಒಂದೆಡೆ ಅಪಾರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಇನ್ನೊಂದೆಡೆ ಅಸಂಖ್ಯಾತ ಜನರು ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್, ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳಿಂದ ವಂಚಿತರಾಗಿದ್ದರೆ! ತಾರತಮ್ಯದಿಂದ ಕೂಡಿರುವ ಆನ್‌ಲೈನ್ ’ಶಿಕ್ಷಣ’ವು ಶ್ರೀಮಂತರ ಪರವಾಗಿವುದರಿಂದಲೇ ದೇಶದ ಜನತೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಜನಪ್ರಿಯ ಜನಾಭಿಪ್ರಾಯಕ್ಕೆ ಮಣಿದ ರಾಜ್ಯ ಸರ್ಕಾರ ಆನ್‌ಲೈನ್ ’ಶಿಕ್ಷಣ’ವನ್ನು ನಿ?ಧಿಸಿತ್ತು.

ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಆನ್‌ಲೈನ್ ’ಶಿಕ್ಷಣ’ ಮಾರಾಟಗಾರರ ಲಾಬಿಯ ಒತ್ತಡಕ್ಕೆ ಶರಣಾದ ರಾಜ್ಯ ಸರ್ಕಾರ ಜನಾಭಿಪ್ರಾಯವನ್ನು ತಿರುಚುವ ಕುಟಿಲೋಪಾಯದಿಂದ ನಾಮಾಂಕಿತ ತಜ್ಞರ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ನಾಡಿನ ಶಿಕ್ಷಣ ತಜ ರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಘಟನೆಗಳು, ಮತ್ತು ಸಂಬಂಧಪಟ್ಟ ಯಾರೊಬ್ಬರೊಂದಿಗೂ ಪ್ರಜಾತಾಂತ್ರಿಕವಾಗಿ ಚರ್ಚಿಸಿದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಆನ್‌ಲೈನ್ ’ಶಿಕ್ಷಣ’ ಮಾರಾಟಗಾರರ ಲಾಬಿಗೆ ಪೂರಕವಾದಂತಹ ವರದಿಯನ್ನು ಮಂಡಿಸಿರುವುದು ಖಂಡನೀಯ. ಈ ವರದಿಯು ಬಡ ವಿದ್ಯಾರ್ಥಿಗಳಿಗೆ ಹಾಗೂ ನಾಡಿನ ಜನಪ್ರಿಯ ಜನಾಭಿಪ್ರಾಯಕ್ಕೆ ವಿರುದ್ದವಾಗಿದೆ. ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದೆ. ಅಮಾಯಕ ಪೋ?ಕರ ಸುಲಿಗೆಗೆ ಪೂರಕವಾಗಿರುವುದರಿಂದ ರಾಜ್ಯ ಸರ್ಕಾರವು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಆಗ್ರಹಿಸುತ್ತದೆ.

Contact Your\'s Advertisement; 9902492681

ಅಚ್ಚರಿಯ ಸಂಗತಿಯೆಂದರೆ ಈ ವರದಿಯಲ್ಲಿ ಶೇ.೧೦% ರ? ಮನೆಗಳಲ್ಲಿ ಮಾತ್ರ ಕಂಪ್ಯೂಟರ್ ಸೌಲಭ್ಯ ಇದೆ. ಅವುಗಳಲ್ಲಿ ಶೇ.೨೦% ರ? ಮನೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯ ಇದೆ ಎಂದು ಸ್ವತಃ ಸಮಿತಿಯೇ ಹೇಳಿಕೊಂಡಿದೆ. ಸುಸ್ಥಿತಿಯಲ್ಲಿನ ಕುಟುಂಬಗಳ ಪರಿಸ್ಥಿತಿಯೇ ಇದಾದರೆ ಅಂದೇ ದುಡಿದು ಅಂದೇ ಊಟಮಾಡುವ ಕಾರ್ಮಿಕರು, ಬಡವರು, ರೈತರ ಮಕ್ಕಳು ಅದ್ಹೇಗೆ ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯ? ಅಲ್ಲದೆ ಇಂದು ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಬಹುತೇಕ ಬಡವರು, ಕಾರ್ಮಿಕರ ಕುಟುಂಬಕ್ಕೆ ಸೇರಿದವರಿದ್ದಾರೆ.

ಸಮಿತಿಯೇ ಹೇಳುವ ಪ್ರಕಾರ ನಮ್ಮ ರಾಜ್ಯದ ಪ್ರೌಢಶಾಲಾ ಮಕ್ಕಳಿರುವ ಕುಟುಂಬಗಳಲ್ಲಿ ಕೇವಲ ೫ನೇ ಒಂದರ? ಮನೆಗಳಲ್ಲಿ ಸ್ಮಾರ್ಟ್ ಫೋನ್ ಇವೆಯಂತೆ! ಅಂದರೆ ಸಮಿತಿಯು “ಸಮಾನ ಶಿಕ್ಷಣಕ್ಕೆ ಬದಲಾಗಿ ಶ್ರೀಮಂತರಿಗೆ ಒಂದು ಶಿಕ್ಷಣ ಬಡವರಿಗೆ ಮತ್ತೊಂದು” ಎಂಬುದರ ಪರವಾಗಿದೆಯೇ? ಕಲಿಕೆಗೆ ಪ್ರಶಾಂತ ವಾತಾವರಣ ತುಂಬಾ ಮುಖ್ಯ, ಆದರೆ ನಮ್ಮ ದೇಶದ ಬಹುತೇಕ ಬಡ ಕುಟುಂಬಗಳಿಗೆ ವಾಸಿಸಲು ಕೇವಲ ಒಂದು ಕೊಠಡಿಯ ಮನೆ ಇದೆ. ಐದಾರು ಜನರು ಜೀವ ಹಿಡಿದುಕೊಂಡು ಬದುಕುವುದೇ ಕ?ವಾಗಿರುವ ಇಂಥ ಕೋಣೆಗಳಲ್ಲಿ ಕಲಿಕೆ ಹೇಗೆ ಸಾಧ್ಯ? ಜನರ ಇಂಥ ದಯನೀಯ ಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಶಿಫಾರಸ್ಸು ನೀಡಿರುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತಾಗಿದೆ.

ಮಕ್ಕಳ ಆರೋಗ್ಯದ ಮೇಲೆ ಮೋಬೈಲ್, ಟಿವಿ, ಕಂಪ್ಯೂಟರ್ ಬಳಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಶಿಕ್ಷಣ ತಜ್ಞರು, ವೈದ್ಯರ ಖಚಿತ ಅಭಿಪ್ರಾಯ. ಇದ್ಯಾವುದನ್ನು ಲೆಕ್ಕಿಸದೆ, ಮಕ್ಕಳ ಆರೋಗ್ಯ ಮತ್ತು ಕಲಿಕೆಯ ಅವಕಾಶಗಳನ್ನು ಗಮನಿಸದೇ ಸಮಿತಿ ನೀಡಿರುವ ವರದಿಯನ್ನು ಗಮನಿಸಿದರೆ ಕೇವಲ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಈ ಸಮಿತಿಯು ಆನ್‌ಲೈನ್ ’ಶಿಕ್ಷಣ’ಕ್ಕೆ ಶಿಫಾರಸ್ಸು ಮಾಡಿದೆಯೇನೋ ಎಂಬ ಶಂಕೆ ಜನರಲ್ಲಿ ಮೂಡುತ್ತಿದೆ.

ಮಕ್ಕಳ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸಿ ಬಹುಬೇಗ ಕರೋನಾ ನಿಯಂತ್ರಣಕ್ಕೆ ತಂದು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಪ್ರಜಾಸತ್ತಾತ್ಮಕ ಪ್ರಕ್ರಿಯೇಯಲ್ಲಿ ಕ್ರಮಕೈಗೊಳ್ಳುವುದನ್ನು ಬಿಟ್ಟು ಕಾಲಗತಿಯಲ್ಲಿ ನಿರ್ಣಯವಾಗದ ಮತ್ತು ಜನಸಾಮಾನ್ಯರ ಕೈಗೆ ನಿಲುಕದ ಆನ್‌ಲೈನ್ ಶಿಕ್ಷಣವನ್ನು ಜಾರಿಗೊಳಿಸಲು ರಟಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಶಿಕ್ಷಣ ಉಳಿಸಿ ಸಮಿತಿಯು ಸರಕಾರವನ್ನು ಆಗ್ರಹಿಸುತ್ತದೆ. ಬದಲಿಗೆ ಈ ಸಂಕ?ದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಒಂದು ಸಮಗ್ರ ನೀತಿಯನ್ನು ರೂಪಿಸಲು ನಾಡಿನ ವೈದ್ಯರು, ಶಿಕ್ಷಣ ತಜ್ಞರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಘಟನೆಗಳೊಂದಿಗೆ ಪ್ರಜಾತಾಂತ್ರಿಕ ಚರ್ಚೆಯನ್ನು ರಾಜ್ಯ ಸರ್ಕಾರ ಆರಂಭಿಸಬೇಕೆಂದು ನಾವು ಆಗ್ರಹಿಸುತ್ತೇವೆ.

-ಯೇಸಪ್ಪ ಜಿ.ಕೆ
ಸಂಚಾಲಕರು,
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ. ವಾಡಿ ನಗರ ಘಟಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here