ಮಾಮ್ ಬ್ಲಿಚಿಂಗ್ ಪ್ರಕರಣ: ಪರಿಹಾರಕ್ಕಾಗಿ ಶ್ರಮಿಸಿದ ಕಲಬುರಗಿ ಹೋರಾಟಗಾರ

0
305
  • ಸಾಜಿದ್ ಅಲಿ

ಕಲಬುರಗಿ: ವಿಶ್ವದ ಎದುರು ಭಾರತದ ತಲೆತಗ್ಗಿಸುವ ಹೃದಯ ವಿದ್ರಾವಕ ಘಟನೆಯಾದ ಮಾಮ್ ಬ್ಲೀಚಿಂಗ್ ಝಾರಖಂಡ ರಾಜ್ಯದಲ್ಲಿ ತಬ್ರೆಜ್ ಅನ್ಸಾರಿ ಮೇಲೆ ನಡೆದಿತು.

ಕೆಲವು ಕೀಡಿಗೇಡಿಗಳು ತಬ್ರೆಜ್ ಅನ್ಸಾರಿಯನ್ನು ಕಳ್ಳನೆಂದು ಸಮೂಹಿಕವಾಗಿ ಥಳಿಸಿ, ಜೈ ಶ್ರೀರಾಮ ಘೋಷಣೆಗೆ ಒತ್ತಾಯಿಸಿ ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಮಾನವ ಹಕ್ಕುಗಳ ಹೋರಾಟಗಾರರ ಹಾಗೂ ವೃತಿಯಲ್ಲಿ ಇಂಜಿನಿಯರ್ ರಾದ ರಿಯಾಜ್ ಖತೀಬ್ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ದೇಶದಲ್ಲಿ ನಡೆಯುತ್ತಿರುವ ಸಮೂಹಿಕ ಹಲ್ಲೆ (ಮಾಮ್ ಬ್ಲೀಚಿಂಗ್) ಪ್ರಕರಣಗಳ ವಿರುದ್ಧ ಧ್ವನಿ ಎತ್ತಿ ತಬ್ರೇಜ್ ಅನ್ಸಾರಿ ಆರೋಪಿಗಳಿಗೆ ಶಿಕ್ಷೆ ಮತ್ತು 1 ಕೋಟಿ ಪರಿಹಾರ ಹಾಗೂ ಇಂತಹ ಗಂಭೀರ ಪ್ರಕರಣಗಳ ಕಡಿವಾಣಕ್ಕೆ ಸ್ಪೇಷಲ್ ಟಾಸ್ಕ್ ಫೋರ್ಸ್ ರಚಿಸಬೇಕೆಂದು ದೂರಿನಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಮಾನವ ಹಕ್ಕುಗಳ ಆಯೋಗ ರಿಯಾಜ್ ಅವರ ದೂರನ್ನು ಪರಿಶೀಲಿಸಿ, ಮಾನವ ಹಕ್ಕುಗಳ ಆಯೋಗ ಪ್ರಕರಣದಲ್ಲಿ ಮೃತಪಟ್ಟ ತಬ್ರೇಜ್ ಅನ್ಸಾರಿ ಕುಟುಂಬಕ್ಕೆ 2 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಇದರ ಶ್ರೇಯೆ ಕಲಬುರಗಿಯ ಈ ಹೋರಾಟಗಾರರ ರೀಯಾಜ್ ಅವರಿಗೆ ಸಲ್ಲುತ್ತದೆ.

ಅಷ್ಟಕ್ಕೂ ಯಾರು ಈ ರಿಯಾಜ್ ಖತೀಬ್: ರಿಯಾಜ್ ಖತೀಬ್ ವೃತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಜೊತೆಗೆ ಸಮಾಜ ಸೇವೆಯೊಮಂದಿಗೆ ಮಾನವ ಹಕ್ಕುಗಳ ಹೋರಾಟಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಲವು ಪ್ರಕರಣಗಳ ಬಗ್ಗೆ ಮಾನವ ಹಕ್ಕುಗಳ ಆಯೋಗದ ಜೊತೆಯಲ್ಲಿ ತನ್ನ ಹೋರಾಟ ನಡೆಸುತ್ತಾ ಬಂದಿದ್ದಾರೆ. ತಬ್ರೆಜ್ ಅನ್ಸಾರಿ ಹತ್ಯೆ ಪ್ರಕರಣ ರಾಷ್ಟ್ರ ಅಥವಾ ವಿಶ್ವ ಮಟ್ಟದಲ್ಲಿ ಭಾರಿ ತಲ್ಲಣಗೊಳಿಸಿತು. ಈ ಹೋರಾಟದಲ್ಲಿ ರಿಯಾಜ್ ತೊಡಗಿಸಿಕೊಂಡು ಯಶಸ್ಸು ಕಾಣುವ ಮೂಲಕ ಕಲಬುರಗಿಯ ಕೀರ್ತಿ ಹೆಚ್ಚಿಸಿದ್ದಾರೆ.

ಇದಕ್ಕೂ ಈ ಘಟನೆಗೆ ಮುನ್ನ ಮಧ್ಯಪ್ರದೇಶದಲ್ಲಿ ದಲಿತ ಯುವಕರನ್ನು ಸಮೂಹಿಕವಾಗಿ ಥಳಿಸಿ ಇಬ್ಬರು ದಲಿತ ಯುವಕರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಕುರಿತು ಹೋರಾಟ ನಡೆಸಿದ ಅವರು ಮೃತ ಕುಟುಂಬಕ್ಕೆ ತಲಾ 4.12 ಸಾವಿರ ಪರಿಹಾರವನ್ನು ಮೃತ ಇಬ್ಬರು ದಲಿತ ಕುಟುಂಬಕ್ಕೆ 8.5 ಲಕ್ಷ ಬಿಡುಗಡೆಗೆ ಪ್ರಮುಖ ಪಾತ್ರವಾಗಿ ಶ್ರಮಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಕಲಬುರಗಿ ಆಸ್ಪತ್ರೆಯಲ್ಲಿ ಮಶಿನ್ ಕೆಟ್ಟಿರುವುದರಿಂದ ಆಕಾಶ ಎಂಬ ಮಗುಯೊಂದು ಮೃತಪಟ್ಟಿತು. ಅಲ್ಲದೇ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಹಲವು ಮಕ್ಕಳು ಸಾವಿನ ಸುಳಿವಲ್ಲಿ ಸಿಲುಕಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಯ ವಿರುದ್ಧ ಧ್ವನಿ ಎತ್ತಿದ್ದ ಖತೀಬ್ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಖತೀಬ್ ತಿಳಿಸಿದ್ದಾರೆ.

ನಾನು ಸಾಮಾನ್ಯ ವ್ಯಕ್ತಿಯಾಗಿದೇನೆ. ಎಲ್ಲರಂತೆ ನಾನು ಸಹ ಸಮಾಜದಲ್ಲಿ ಶಾಂತಿ ಮತ್ತು ನೇಮದಿ ಬಯಸುತ್ತಿದ್ದು, ಕೆಲ ಸಮಾಜ ಘಾತಕರಿಂದ ಸಮಾಜ ಹಾಳಾಗುತ್ತಿದೆ. ಇದಕ್ಕೆ ಅಮಾನುಷ್ಯವಾಗಿ ಅಮಾಯಕರು ಬಲಿಯಾಗಿ ಹತ್ಯೆಯಾಗುತ್ತಿದ್ದಾರೆ. ಇಂತಹವರ ವಿರುದ್ಧ ನನ್ನ ಹೋರಾಟ. – ರಿಯಾಜ್ ಖತೀಬ್, ಇಂಜಿನಿಯರ್ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here