ಕಲಬುರಗಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ಹಗಲು ರಾತ್ರಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗಳಾದ ಆರೋಗ್ಯ ಇಲಾಖೆ ಮತ್ತೊಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಸೋಂಕು ಮಾಡುತ್ತಿದೆ.
ಈಗಾಗಲೇ ಜಿಲ್ಲೆಯ ಹತ್ತಕ್ಕೂ ಹೆಚ್ಚು ಪೊಲೀಸ್ ಹೆಚ್ಚು ಸಿಬ್ಬಂದಿಗೆ ವೈರಸ್ ದೃಢ ಪಟ್ಟಿದ್ದು, ಪೊಲೀಸ್ ಠಾಣೆಗಳನ್ನು ಸ್ಯಾನಿಟೈಜ್ ಮಾಡಿ ತಾತ್ಕಾಲಿಕವಾಗಿ ಸಿಲ್ ಡೌನ್ ಸಹ ಮಾಡಲಾಗಿತ್ತು.
ಆದರೆ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ್ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗಳ ಕೊರೊನಾ ವರದಿ ಪಾಜಿಟಿವ್ ಆಗಿದೆ. ಸದ್ಯ ಠಾಣೆಯನ್ನು ಸ್ಯಾನಿಟೈಜ್ ಮಾಡಲಾಗುತ್ತಿದ್ದು, ಸಿಲ್ ಡೌನ್ ಮಾಡುವ ಬಗ್ಗೆ ಕ್ರಮ ಕೈಗೊಳುವ ನಿರ್ಧಾರ ತೆಗೆದುಕೊಳ್ಳುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.