ಖರ್ಗೆ ಜನ್ಮದಿನ: ವೃದ್ಧಾಶ್ರಮಕ್ಕೆ ದಿನಸಿ ದೇಣಿಗೆ

0
44

ವಾಡಿ: ಹೆತ್ತ ಕುಡಿಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ವೃದ್ಧಾಶ್ರಮ ಸೇರಿದ ಹಿರಿಯ ಜೀವಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಕೇಂದ್ರ ಕಾರ್ಮಿಕ ಸಲಹಾ ಸಮಿತಿಯ ಮಾಜಿ ಸದಸ್ಯ, ವಾಡಿ ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಭೀಮರಾವ ದೊರೆ ಹಾಗೂ ಪುರಸಭೆ ಸದಸ್ಯ ಪೃಥ್ವಿರಾಜ ಸೂರ್ಯವಂಶಿ ಅವರು ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ೭೮ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಲಬುರಗಿ ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮಕ್ಕೆ ಮಂಗಳವಾರ ಕುಟುಂಬ ಸಮೇತ ಭೇಟಿ ನೀಡಿದ ಭೀಮರಾವ ಧೊರೆ, ಸುಮಾರು ಇಪ್ಪತ್ತು ಸಾವಿರ ರೂ. ಮೌಲ್ಯದ ಅಕ್ಕಿ, ಬೇಳೆ, ರವಾ, ಹಿಟ್ಟು, ಪುಟಾಣಿ, ಸಾಬೂನು, ಟೂತ್ ಪೇಸ್ಟ್, ಬ್ರೆಶ್, ಎಣ್ಣೆ, ಅರಶಿಣ, ಖಾರದ ಪುಡಿ ಹೀಗೆ ಇತರ ಅಗತ್ಯ ದಿನಸಿ ವಸ್ತುಗಳನ್ನು ಅನಾಥ ಹಿರಿಯ ಜೀವಗಳಿಗೆ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Contact Your\'s Advertisement; 9902492681

ಇತಿಹಾಸ ನೆನಪಿಡುವಂತೆ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಖರ್ಗೆ ಅವರ ರಾಜಕಾರಣ ನಮಗೆಲ್ಲ ಮಾದರಿಯಾಗಿದೆ. ಬಡವರ ಕಣ್ಣೀರು ಒರೆಸಿದ ಜನನಾಯಕನ ಹುಟ್ಟು ಹಬ್ಬ ಅನಾಥ ಹಿರಿಯರ ಮಧ್ಯೆ ಆಚರಿಸಿದ್ದು ಮನಸ್ಸಿಗೆ ತೃಪ್ತಿ ತಂದಿದೆ ಎಂದು ಭೀಮರಾವ ದೊರೆ ಪ್ರತಿಕ್ರೀಯಿಸಿದ್ದಾರೆ.

ಸುಮಿತ್ರಾ ಭೀಮರಾವ ದೊರೆ, ಎಪಿಜೆ ಅಬ್ದುಲ್ ಕಲಾಂ ಸಂಘದ ಅಧ್ಯಕ್ಷ ಭಾಗಣ್ಣ ಬಿ.ದೊರೆ, ಅಭಿಶೇಕ ರಾಠೋಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here