ವೈರಸ್‌ನಿಂದ ರಕ್ಷಣೆಗೆ ಆಯುರ್ವೇದ ಮದ್ದು: ಡಾ. ಅರಗಡೆ

0
53

ಆಳಂದ: ಕೊರೊನಾ ಸೇರಿದಂತೆ ಇನ್ಯಾವುದೇ ವೈರಸ್‌ನಿಂದ ರಕ್ಷಣೆ ಪಡೆಯಲು ಮುಂಜಾಗೃತ ಕ್ರಮ ಅನುಸರಿಸಿ ಆಯುರ್ವೇದ ಉಪಚಾರ ಪಡೆದುಕೊಂಡ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆಯುಷ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಅಪ್ಪಾರಾವ್ ಅರಗಡೆ ಅವರು ಸೋಮವಾರ ಹೇಳಿದರು.

ಪಟ್ಟಣದ ಉಮರಗಾ ಹೆದ್ದಾರಿಯಲ್ಲಿನ ಜಗದ್ಗುರು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಆಯುಷ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಿದ ಮಾತ್ರೆಗಳು ವಿತರಿಸಿ ಅವರು ಮಾತನಾಡಿದರು.
ಆಯುಷ್ಯ ಇಲಾಖೆಯಿಂದ ಕೋವಿಡ್-೧೯ ಎದುರಿಸುವ ಸಾಮರ್ಥ್ಯದ ಮಾತ್ರೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಈ ರೋಗದ ಕುರಿತು ಭಯ ಭೀತರಾಗದೆ ಮುಂಜಾಗೃತ ಕ್ರಮ ವಹಿಸಿ ಇಲಾಖೆ ನೀಡುವ ಸೌಲಭ್ಯಗಳ ಲಾಭವನ್ನು ಪಡೆಯಬೇಕು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ, ಅನುಭವ ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿದ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯಿಂದ ನೀಡುವ ಕಾರ್ಡ್ ಒದಗಿಸುವುದು ಲಾಕ್‌ಡೌನ್ ವೇಳೆ ಸರ್ಕಾರ ನೀಡಿದ ತಲಾ ೫ ಸಾವಿರ ರೂಪಾಯಿ ದೊರೆಯುವಂತೆ ಹಾಗೂ ಆರೋಗ್ಯ ತಪಾಸಣೆ ಮತ್ತು ಔಷದೋಪಚಾರ ಕಾರ್ಯ ಕೈಗೊಳ್ಳುವ ಮೂಲಕ ತೋಂಟದಾರ್ಯ ಮಠದ ಈ ಸೇವಾ ಕಾರ್ಯದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಉಪಸ್ಥಿತರಿದ್ದ ಪತ್ರಕರ್ತ ಮಹಾದೇವ ವಡಗಾಂವ ಮಾತನಾಡಿ, ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಿಂದುಳಿದ ಭಾಗದ ಬಡವರ ಸೇವಾ ಕಾರ್ಯಕ್ಕಾಗಿ ತೋಟ್ಟ ಸಂಕಲ್ಪದಿಂದಾಗಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕೈಗೊಳ್ಳಲು ಹಾಕಿದ ಅಡಿಪಾಯದಿಂದ ಪರೋಕ್ಷ, ಅಪರೋಕ್ಷವಾಗಿ ಇಲ್ಲಿಯ ಜನರಿಗೆ ಲಾಭವಾಗುತ್ತಿದೆ.

ಅವರು ಸಲಹೆಯಂತೆ ಕಳೆದೆರಡು ವರ್ಷದಿಂದ ಆರಂಭಗೊಂಡ ಅನುಭವ ಮಂಟಪ ಕಾರ್ಯದಲ್ಲಿ ೧೨೦ ಕುಟುಂಬಗಳಿಗೆ ಉಚಿತವಾಗಿ ಕಾರ್ಮಿಕ ಇಲಾಖೆಯ ಕಾರ್ಡ್ ಒದಗಿಸಿದ ಫಲವಾಗಿ ಲಾಕ್‌ಡೌನ್‌ನಂತ ಸಂಕಷ್ಟದ ಸಮಯದಲ್ಲಿ ಅವರ ಖಾತೆಗಳಿಗೆ ತಲಾ ಐದು ಸಾವಿರ ಹೀಗೆ ಒಟ್ಟು ೬ ಲಕ್ಷ ರೂಪಾಯಿ ಬಡ ಕಾರ್ಮಿಕರ ಕೈ ಸೇರಿದ್ದು, ತಜ್ಞ ವೈದ್ಯರಿಂದ ಜನರ ಆರೋಗ್ಯ ತಪಾಸಣೆ, ಕಳೆದ ವರ್ಷದ ಬಲಗಾಲದಲ್ಲೂ ಸರ್ಕಾರಕ್ಕೆ ಗೋ ಶಾಲೆಗೆ ನಿವೇಶನ, ನೀರು, ಮೇವು ಒದಗಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ನೂರಾರು ಜಾತಿಯ ಗಿಡಮರಗಳನ್ನು ಬೆಳೆದು ಇಲ್ಲಿನ ಜನರಿಗೆ ಬೆಳಗಿನ ವಾಯುವಿಹಾರಕ್ಕೆ ನಿಸರ್ಗದ ವಾತಾವರಣ ಒದಗಿಸಿದ್ದು, ಇದೊಂದು ನಿಸರ್ಗಧಾಮವಾಗಿದೆ. ಹೀಗೆ ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಮುಂದಾಲೋಚನೆ ಹೊತ್ತು ಇಂಥ ಸಮಾಜ ಕಾರ್ಯಕ್ಕೆ ರಾಜಕೀಯ ಮುಖಂಡರು, ಸರ್ಕಾರ, ಜಿಲ್ಲಾಡಳಿತ ಸಹಕರಿಸುವ ಮೂಲಕ ಅಗಲಿದ ಪೂಜ್ಯರ ಕನಸು ನನಸಾಗಿಸಲು ಸಂಕಲ್ಪ ತೊಡಬೇಕಾಗಿದೆ ಎಂದರು.

ಕಲಬುರಗಿಯ ವಾಸ್ತು ಶಿಲ್ಪಿ ಪ್ರಭುಲಿಂಗ ಮಹಾಗಾಂವಕರ್, ರೈತ ಮುಖಂಡ ಸುಧಾಮ ಧನ್ನಿ, ಪಾಂಡುರಂಗ ಮಾವೀನಕರ್, ಚಂದ್ರಕಾಂತ ಮಸೂಂಧೆ, ಲಾಡಪ್ಪ ಗುತ್ತಿಗೆದಾರ, ಬಸವಣಪ್ಪ ಹಡಪದ, ಸಂಜು ಮಸೂಂಧೆ, ಶಿಕ್ಷಕ ಸೂರ್ಯಕಾಂತ ಮುಲಗೆ, ಪಂಡಿತರಾವ್ ಬಳಬಟ್ಟಿ, ಜಾಫರ್ ಅಲಿ ಬ್ರೇಕರ್ ಸೇರಿದಂತೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಡಾ. ಅಪ್ಪಾರಾವ್ ಅರಗಡೆ ಅವರು ಆರೋಗ್ಯ ವಿಚಾರಿಸಿ ವೈರಸ್ ನಿಯಂತ್ರಣದ ಮಾತ್ರೆಗಳು ಒದಗಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here