ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಬೆಡ್ ಕೊರತೆ ಇದೆ ಅಂತ ಪ್ರಿಯಾಂಕ್ ಖರ್ಗೆ ಸ್ವಂತ ದುಡ್ಡಲ್ಲಿ 650 ಬೆಡ್ ಖರೀದಿ ಮಾಡಿ ರಾಯಚೂರು ಹಾಗೂ ಕಲಬುರಗಿಗೆ ಕಳಿಸಿದರೇ ಕಾಂಗ್ರೆಸ್ ನವರ ಬೆಡ್ ಅದು ಬೇಡ ಅಂದ್ರಂತೆ.. ಇದರಲ್ಲೂ ರಾಜಕೀಯ ಬೇಕಾ? ಕೊಟ್ಟ ಬೆಡ್ ಬೇಡ ಎನ್ನುವ ಕೆಲ ಅಧಿಕಾರಿಗಳಿಗೆ ವಿದ್ಯೆಯೂ ಇಲ್ಲ ಬುದ್ದಿಯೂ ಇಲ್ಲ. ರಾಯಚೂರು ಡಿಸಿ ತಗೊಂಡ್ರಂತೆ ಅವರಿಗೆ ವಿವೇಚನೆ ಇದೆ. ತರಕಾರಿ ಹೂ ಹಣ್ಣು ರೈತರಿಂದ ಇದೇ ಕಾಂಗ್ರೆಸ್ ಖರೀದಿ ಮಾಡುವಾಗ ಸುಮ್ಮನಿದ್ರಿ ಈಗ ಬೆಡ್ ಖರೀದಿ ಮಾಡಿ ಉಚಿತ ಕೊಟ್ಟರೆ ಇದನ್ನ ಬೇಡ ಅನ್ನುವುದಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವುಕುಮಾರ ಕೀಡಿಕಾರಿದರು
ಇಂದು ನಗರಕ್ಕೆ ಆಗಮಿಸಿದ ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆಶಾ ಕಾರ್ಯಕರ್ತೆಯರು, ಮಡಿವಾಳರು, ಚಾಲಕರು, ನೇಯ್ಗೆಯವರು, ಸವಿತಾ ಸಮಾಜದ ಶ್ರಮಿಕರು ಅವರಿಗೆ ಆರ್ಥಿಕ ಸಹಾಯ ಮಾಡಿ ಅಂದ್ವಿ. 5,000 , 2000 ಕೋಡೋದಕ್ಕೂ ಇವರಿಂದ ಆಗಲಿಲ್ಲವಲ್ಲ. ವೃತ್ತಿವಂತರಿಗೆ ಶ್ರಮಿಕರಿಗೆ ನೀವು ಆರ್ಥಿಕ ಸಹಾಯ ಮಾಡದೇ ಹೋದರೆ ಯಾಕ್ರೀ ಬೇಕು ಸರಕಾರ? ಆಶಾ ಕಾರ್ಯಕರ್ತೆಯರು 21 ದಿನದಿಂದ ಪ್ರತಿಭಟನೆ ಮಾಡಿದರಲ್ಲ ಅವರ ಸಮಸ್ಯೆ ಬಗೆಹರಿಸಿದ್ರಾ? ವಾಣಿಜ್ಯ ಆಸ್ತಿ, ಗೃಹ ಆಸ್ತಿ ಸೇರಿದಂತೆ ವಾಹನ ಟ್ಯಾಕ್ಸ ಒಂದು ವರ್ಷದವರೆಗೆ ತೆಗೆದುಕೊಳ್ಳಬಾರದು ಎಂದು ಆಗ್ರಹಿಸುತ್ತೇನೆ. ದುಡಿಮೆ ಇಲ್ಲ ಅವರೆಲ್ಲ ಎಲ್ಲಿಂದ ತರಬೇಕು? ಎಂದು ಪ್ರಶ್ನಿಸಿದ್ದರು.
ಸೋಂಕಿತರು ತೀರಿದಾಗ ಅವಮಾನಕರವಾಗಿ ಹೂಳಲಾಯ್ತು. ನಿಮ್ಮ ತಂದೆ ತಾಯಿ ಅಥವಾ ನಿಮ್ಮ ಸಂಬಂಧಿಕರಾಗಿದ್ರೆ ಹೀಗೆ ಮಾಡ್ತಾ ಇದ್ರಾ? ಮೂವತ್ತಕ್ಕು ಅಧಿಕ ಪೌರಕಾರ್ಮಿಕರು ಸೋಂಕಿನಿಂದ ತೀರಿ ಹೋಗಿದ್ದಾರೆ. ಆ ನಿರ್ಗತಿಕರಿಗೆ ಯಾರುದಿಕ್ಕು? ನಿಮ್ಮದೇ ಸರಕಾರ ಇದೆ ನಾವು ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದರೆ ತನಿಖೆ ಮಾಡಲಿ.ನಮಗೆ ಅದೇ ಬೇಕಾಗಿರುವುದು. ಹಾಗೆ ಮಾಡಿದರೆ ನಾನು ಸ್ವಾಗತಿಸುತ್ತೇನೆ. ಅದನ್ನು ಬಿಟ್ಟು ಹೀಗೆ ನೋಟಿಸು ಕೊಟ್ಟು ನಮ್ಮನ್ನು ಬಗ್ಗಿಸಬೇಕು ಎಂದು ಭ್ರಮಿಸಿದ್ದರೆ ಅದು ನಿಮ್ಮ ಹಣೆಯಲ್ಲೂ ಬರೆದಿಲ್ಲ ಎಂದು ಕುಟುಕಿದರು.
ವಿಧಾನಸಭೆಯ ವಿಶೇಷ ಆಧಿವೇಶನ ಕರೆಯಲಿ. ನಾವು ಅಲ್ಲಿ ಸುದೀರ್ಘ ಚರ್ಚೆ ನಡೆಸುತ್ತೇವೆ., ಮಂತ್ರಿಗಳು ಅವ್ಯವಹಾರದಲ್ಲಿ ತೊಡಗಿದರೆ ಆ ಬಗ್ಗೆ ತನಿಖೆ ಮಾಡುವುದು ಬಿಟ್ಟು ಅಧಿಕಾರಿಗಳನ್ನು ಬದಲಾಯಿಸುತ್ತೀರಾ? ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಡಿಯಲ್ಲಿ ಲೆಕ್ಕ ಮಾಡಿ, ಜನರ ದುಡ್ಡು ದುರುಪಯೋಗವಾಗ್ತಿದೆ. ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಸೋಂಕು ತಂದವರೇ ನೀವು ಇದೆಲ್ಲ ನಿಮ್ಮ ಜವಾಬ್ದಾರಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊವೀಡ್ ನಿರ್ವಹಣೆಯಲ್ಲಿ ವಿಫಲವಾಗಿವೆ. ಜನರು ನರಳಲು ಅವರೇ ಕಾರಣ. ಈ ಕುರಿತು ಕೋರ್ಟ್ಗೆ ಹೋಗಲ್ಲ ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ ಎಂದರು.
ಈ ಸಂದರ್ಭದಲ್ಲಿ ಈಶ್ವರಪ್ಪ ಖಂಡ್ರೆ, ಶಾಸಕರಾದ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಶಾಸಕರಾದ ಅಜಯ್ ಧರಂ ಸಿಂಗ್, ಎಂ.ವೈ. ಪಾಟೀಲ್, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತಿತರರು ಜತೆಗಿದ್ದರು.