ಕೊರೊನಾ ಹೆಸರಲ್ಲಿ ತಬ್ಲಿಗಿಗಳಿಗೆ “ಬಲಿಪಶು” ಮಾಡಲಾಗಿದೆ: ಬಾಂಬೆ ನ್ಯಾಯಲಯ

0
65

ಮುಂಬೈ: ಕೊರೊನಾ ಹೆಸರಲ್ಲಿ ತಬ್ಲಿಗಿ ಜಮಾತೆಗೆ ಬಲಿಪಶು ಮಾಡಲಾಗಿದೆ ಎಂದು ಮುಂಬೈಯ ಔರಂಗಾಬಾದ್ ಉಚ್ಚ ನ್ಯಾಯಲಯ ಪೀಠ ತಿಳಿಸಿದೆ.

ಇದೇ ವರ್ಷದ ಮಾರ್ಚನ್ ನಲ್ಲಿ ದೆಹಲಿಯಲ್ಲಿ ತಬ್ಲಿಗಿ ಜಮಾತನ ಕಾರ್ಯಕ್ರಮ ಒಂದರಲ್ಲಿ ವಿದೇಶ ನಗರೀಕರು ಸಹಿತ ತಬ್ಲಿಗ್ ಸಮುದಾಯಕ್ಕೆ ಕೊರೊನಾ ಹೆಸರಲ್ಲಿ ಬಲಿಪಶು ಮಾಡಿ ದೇಶದಲ್ಲಿ ಕೊರೊನಾ ಹರಡಿಸುತ್ತಿರುವ ಬಗ್ಗೆ ಅನಾಗತ್ಯ ಆರೋಪ ಮಾಡಲಾಗಿದೆ ಎಂದು ತಿಳಿಸಿ, 29 ವಿದೇಶಿ ನಾಗರಿಕರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಟಿ.ವಿ.ನಲವಾಡೆ ಮತ್ತು ನ್ಯಾಯಮೂರ್ತಿ ಎಂ.ಜಿ.ಸೆವಾಲಿಕರ್ ಅವರ ವಿಭಾಗೀಯ ಪೀಠ ಆಗಸ್ಟ್ 21 ರಂದು ಈ ಹೇಳಿಕೆ ನೀಡಿದೆ.

Contact Your\'s Advertisement; 9902492681

ಈ ವಿದೇಶಿಯರಿಗೆ ಭಾರತದ ಮಸೀದಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿಲ್ಲ ಮತ್ತು ಈ ಚಟುವಟಿಕೆಯನ್ನು ಸರ್ಕಾರವು ಶಾಶ್ವತವಾಗಿ ನಿಷೇಧಿಸಿದೆ ಎಂದು ತೋರಿಸಲು ದಾಖಲೆಯಲ್ಲಿ ಏನೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ. “ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರವೇ ತಬ್ಲಿಗಿ ಜಮಾಅತ್ ಚಟುವಟಿಕೆ ನಿಂತುಹೋಯಿತು. ಈ ಕುರಿತು ಅಪಪ್ರಚಾರ ಮಾಡಲಾಗಿದೆ ಎಂದಿದೆ.

“ಕೋವಿಡ್ -19 ಸಾಂಕ್ರಾಮಿಕದಿಂದ ಉದ್ಭವಿಸುವ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಸಹಿಷ್ಣುತೆಯನ್ನು ತೋರಿಸಬೇಕು ಮತ್ತು ನಮ್ಮ ಅತಿಥಿಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು ಎಂದು ಹೇಳಿದ ನ್ಯಾಯಾಲಯವು “ಅವರಿಗೆ ಸಹಾಯ ಮಾಡುವ ಬದಲು, ಪ್ರಯಾಣ ದಾಖಲೆಗಳ ಉಲ್ಲಂಘನೆಗೆ ಕಾರಣರು ಮತ್ತು ಕೊರೋನಾ ವೈರಸ್ ಹರಡುವ ಜವಾಬ್ದಾರರು ಎಂದು ಆರೋಪಿಸಿ ನಾವು ಅವರನ್ನು ಜೈಲಿಗೆ ಹಾಕಿದೇವೆ ಎಂದು ಪೀಠ ಹೇಳಿದೆ.

ನ್ಯಾಯಲಯ ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಪೊಲೀಸರು ಬದ್ಧತೆಯಿಂದ ವರ್ತಿಸಿದ್ದಾರೆ ಎಂದು ನ್ಯಾಯಪೀಠ ಒತ್ತಿಹೇಳಿದ್ದು, ಅನ್ಯ ಕೆಲವು ರಾಜ್ಯ ಸರ್ಕಾರಗಳು ರಾಜಕೀಯ ಕಾರ್ಯಗತವಾಗಿ ಕಾರ್ಯನಿರ್ವಹಿಸಿವೆ ಎಂದಿದೆ.

ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಗಿ ಜಮಾಅತ್ ಕಾರ್ಯಕ್ರಮವೊಂದರಲ್ಲಿ ಪ್ರವಾಸೋದ್ಯಮ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ 29 ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here