ಅಖಿಲ ಭಾರತ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ಮರಣೆ ಸಂಚಿಕೆ ಸಂಪಾದಕ ಮಂಡಳಿಗೆ ವಿತರಣೆ

0
253

ಕಲಬುರಗಿ: ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ “ಕವಿಜನ ಮಾರ್ಗ” ಕೃತಿಯ ಸಂಪಾದಕ ಮಂಡಳಿಗೆ ಕೃತಿ ಸಮರ್ಪಣೆ ಕಾರ್ಯಕ್ರಮವನ್ನು ನಗರದ ಕನ್ನಡ ಭವನದ ಸುವರ್ಣಸೌಧ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಗೆ ತಲುಪಿಸುವಲ್ಲಿ ವಿಳಂಬವಾಗಿದ್ದು, ನಾಳೆಯಿಂದಲೇ ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆ ಲೇಖಕರಿಗೆ ನಾಳೆಯಿಂದಲೇ ಪೋಸ್ಟ್ ಮೂಲಕ ತಲುಪಿಸಲಾಗುವುದು. ಜಿಲ್ಲೆಯ ಲೇಖಕರಿಗೆ ಬರುವ ಭಾನುವಾರ ಆಯೋಜಿಸುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಸಮ್ಮೇಳನದ ನಡಾವಳಿ ಪ್ರಕಾರ ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯವರಿಗೆ ಗೌರವಧನವನ್ನು ಕೂಡಲೇ ತಲುಪಿಸಲಾಗುವುದು ಎಂದರು.

ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಸ್ವಾಮಿರಾವ ಕುಲಕರ್ಣಿ, ಸಂಪಾದಕ ಮಂಡಳಿಯ ಎಸ್.ಪಿ.‌ಸುಳ್ಳದ, ಚಂದ್ರಶೇಖರ ಕಟ್ಟಿಮನಿ, ಡಾ. ಶರಣಬಸಪ್ಪ ವಡ್ಡನಕೇರಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ. ವಿಜಯಕುಮಾರ ಪರೂತೆ, ಕೋಶಾಧ್ಯಕ್ಷ ದೌಲತರಾವ ಪಾಟೀಲ ವೇದಿಕೆಯಲ್ಲಿಧ್ದರು.

ಆಳಂದ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ, ಚಿತ್ತಾಪುರ ಕಸಾಪ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ತಾಲ್ಲೂಕು ಕಸಾಪ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ಉತ್ತರ ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಲೇಖಕರಾದ ಡಾ. ಶಿವರಾಮ ಅಸುಂಡಿ, ಶಿವರಂಜನ್ ಸತ್ಯಂಪೇಟೆ, ಎಸ್.ವಿ. ಹತ್ತಿ, ಗುರುಸಂಗಪ್ಪ ಸುಲೇಗಾಂವ, ಶಿವಾನಂದ ಕಶೆಟ್ಟಿ ಇತರರು ಭಾಗವಹಿಸಿದ್ದರು.

ಇದೇವೇಳೆಯಲ್ಲಿ ಇತ್ತೀಚಿಗೆ ನಿಧನರಾದ ಡಾ. ಗೀತಾ ನಾಗಭೂಷಣ, ಡಾ. ಈಶ್ವರಯ್ಯ ಮಠ, ಗವೀಶ ಹಿರೇಮಠ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here