ಕೋಲಾರ: ಜಿಲ್ಲೆಯಲ್ಲಿ ಈಗಾಗಲೇ ವೃದ್ಧಾಪ್ಯ ವೇತನ ಸುಮಾರು ಒಂದು ವರ್ಷಗಳಾದರೂ ವೃದ್ದರಿಗೆ ಸಿಗುತ್ತಿಲ್ಲ ಎಂದು ವೃದ್ಧಾಪ್ಯ ವೇತನ ವದಗಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಸಿಂಹ ಸೇನೆ ಪಡೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಲಾಯಿತು.
ಬಡ ವೃದ್ದರಿಗೆ ವೃದ್ಧಾಪ್ಯ ವೇತನ ವರ್ಷಗಳು ಕಳೆದರೂ ತಿಂಗಳ ಮಾಸಾಶನ ನೀಡದೆ ವಂಚಿಸುತ್ತಿದ್ದಾರೆ. ಅವರು ದಿನಾಲೂ ತಾಲೂಕು ಕಚೇರಿ ಮತ್ತು ಅಂಚೆ ಕಛೇರಿ ಸುತ್ತಾಡಿ ಸುತ್ತಾಡಿ ತುಂಬಾ ಕಷ್ಟಕರವಾಗಿರುತ್ತದೆ. ಆದರೆ ಸರ್ಕಾರ ಒಂದು ವರ್ಷ ಕಳೆದರೂ ವೃದ್ಧಾಪ್ಯ ವೇತನ ನೀಡದೇ ವಂಚಿಸುತ್ತಿದ್ದಾರೆ. ತಾಲೂಕು ಕಛೇರಿಯಲ್ಲಿ ಹೋಗಿ ಕೇಳಿದರೆ ಬೇಜವಾಬ್ದಾರಿತನ ಉತ್ತರವನ್ನು ನೀಡುತ್ತಿದ್ದಾರೆ ಹಾಗೂ ಅಂಚೆ ಕಛೇರಿಯಲ್ಲಿ ಹೋಗಿ ಪೋಸ್ಟ್ ಮ್ಯಾನ್ ನ್ನು ಕೇಳಿದರೆ ಅವರು ಸಹ ಅದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಈ ವೃದ್ದರು ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಲ್ಲಿ ವೃದ್ದರಿಗೆ ಸುಮಾರು ಒಂದು ವರ್ಷದಿಂದ ವೃದ್ಧಾಪ್ಯ ಬರುತ್ತಿಲ್ಲ ಎಂದು ಆರೋಪಿಸಿದರು. ಇಂಥಹ ಕೋವಿಡ್-19 ಸಂದರ್ಭದಲ್ಲಿ ಅವರಿಗೆ ಜೀವನ ಸಾಗಿಸಲು ತುಂಬಾ ತೊಂದರೆಯಾಗುತ್ತದೆ. ಈ ವಿಷಯವೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಗೆ ಬಂದು ಮಾಹಿತಿಯನ್ನು ತಿಳಿಸಿರುತ್ತಾರೆ. ಆದ್ದರಿಂದ ತಾವುಗಳು ದಯವಿಟ್ಟು ಜಿಲ್ಲೆಯಲ್ಲಿರುವ ವೃದ್ದರಿಗೆ ವೃದ್ಧಾಪ್ಯ ವೇತನವು ಪ್ರತಿ ತಿಂಗಳು ಅವರಿಗೆ ತಲುಪಿಸುವಂತೆ ಮಾಡಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ವೃದ್ದರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ನೀಡಲಾಯಿತು.
ಮತ್ತು ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರ ಮತ್ತು ಸೇವನೆ ಮಾಡುವವರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನಾಗರೀಕರಿಗೆ ಧೈರ್ಯ ತುಂಬುವಂತೆ ಮನವಿ ಸಲ್ಲಿಸಲಾಯಿತು. ರಾಜ್ಯದ ಮೂಲೆ ಮೂಲೆಗಳಲ್ಲಿ ಹರಡುವ ಹಾಗೂ ಕೋಲಾರ ಜಿಲ್ಲೆಯಲ್ಲಿ ಸಹ ಮಾದಕ ದ್ರವ್ಯ ಮಾರಾಟ ಮಾಡುವ ಸಂಖ್ಯೆ ಗಣನೀಯವಾಗಿತ್ತು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದ ಕಾರಣ ಮಾರಾಟಗಾರರು ಹಾಗೂ ಸೇವನೆ ಮಾಡುವವರ ಬಗ್ಗೆ ಸೂಕ್ತ ನಿಗಾ ವಹಿಸಿ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಯಿಂದ ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆ ಕೋಲಾರ ಜಿಲ್ಲಾಧ್ಯಕ್ಷರಾದ ರಂಜಿತ್ ಕುಮಾರ್. ಕೋಳಿ ಸಾಕಣೆಯ ರಾಜ್ಯಾಧ್ಯಕ್ಷರಾದ ಎಸ್ ರಘು. ರಾಜ್ಯ ರೈತ ಘಟಕದ ಕಾರ್ಯದರ್ಶಿ ಭಾರ್ಗವ. ರಾಜ್ಯ ರೈತ ಘಟಕದ ಉಪಾಧ್ಯಕ್ಷರಾದ ಮಂಜುನಾಥ್. ಕೋಲಾರ ಜಿಲ್ಲಾ ಖಜಾನೆ ವಿನೋದ್. ಆಟೋ ಘಟಕದ ಕಾರ್ಯದರ್ಶಿ ಗಂಗರಾಜು. ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಅಸ್ಲಾಂ ಪಾಷ. ರಾಜ್ಯ ಶಿಕ್ಷಕರ ಘಟಕದ ಕಾರ್ಯದರ್ಶಿ ನವೀನ್ ಗೌಡ ಹಾಜರಿದ್ದರು.