ಅಗಲಿದ ಹಿರಿಯ ಸಾಹಿತಿಗಳಿಗೆ ಗುಲ್ಬರ್ಗಾ ವಿವಿ ಆವರಣದಲ್ಲಿ ನುಡಿ ನಮನ ಕಾರ್ಯಕ್ರಮ

0
129

ಕಲಬುರಗಿ: ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣ ದಲ್ಲಿ ಇತ್ತೀಚೆಗೆ ಅಗಲಿದ ಕನ್ನಡ ರಂಗ ವಿದ್ವಾಂಸರು ಗವೀಶ ಹಿರೇಮಠ, ವಿದ್ವಾಂಸರು ಚಿಂತಕ ಎಂ.ಎಸ್ ಇರಾಣಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಈಶ್ವರಯ್ಯ ಮಠ ಮತ್ತು ಬೀದರಿನ  ಬಿ.ವಿ ಭೂಮರೆಡ್ಡಿ ಪದವಿ ಮಹಾವಿದ್ಯಾಲಯ ಕನ್ನಡ ಸಹ ಪ್ರಾಧ್ಯಾಪಕರು ಅಶೋಕ್ ಡೊಂಗರೆ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.

ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ನಾಡಿನ ಹೆಸರಾಂತ ವಿದ್ವಾಂಸರು ಕಥೆಗಾರ ರಾದ ಪ್ರೊ. ಎಚ್ ಟಿ ಪೋತೆ ಅವರು ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದರು.

Contact Your\'s Advertisement; 9902492681

ಅವರು ನಮ್ಮನ್ನಗಲಿದ ಈ ಒಬ್ಬಬ್ಬ ವಿದ್ವಾಂಸರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದು ಮಾನವೀಯ ಮೌಲ್ಯಗಳನ್ನು ಬದುಕು ಮತ್ತು ಬರೆಹಗಳಲ್ಲಿ ಅಳವಡಿಸಿಕೊಂಡು ಎಲ್ಲಕ್ಕೂ ಮಿಗಿಲಾಗಿ ಮಾನವರಾಗಿ ಬಾಳಿ ತಮ್ಮ ನಡೆ ನುಡಿ ಗಳಿಂದ ಅನುಕರಣೀಯರಾಗಿದ್ದರು.

ಕನ್ನಡ ಸಾಹಿತ್ಯ ರಂಗಭೂಮಿ ಶಿಕ್ಷಣ ಕ್ಷೇತ್ರದಲ್ಲಿ ಎಂದಿಗೂ ಚಿರಾಯು ಆಗಿರುತ್ತಾರೆ, ಡಾ ಈಶ್ವರಯ್ಯ ಮಠ ಅವರ ಕುಟುಂಬ ವರ್ಗ, ಅಭಿನಂದನೆಗಳು ಅವರ ಹೆಸರಿನಲ್ಲಿ ಪ್ರಶಸ್ತಿ ಇಡಲು ಪ್ರಸ್ತಾಪಿಸಿದರು. ಬೀದರನ ಕರ್ನಾಟಕ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರು ಡಾ ಜಗನ್ನಾಥ ಹೆಬ್ಬಾಳೆ ಅವರು ಡಾ ಈಶ್ವರಯ್ಯ ಮಠ ಮತ್ತು ಪ್ರೊ ಅಶೋಕ ಡೊಂಗ್ರೆ ಅವರ ಕುರಿತು ಮಾತನಾಡಿದರು.

ಈಶ್ವರಯ್ಯ ಅವರ ಅಧ್ಯಯನ ಶಿಸ್ತು ವಾಗ್ಮಿತ್ವ ಬಿದ್ದಂತೆ ನಿಷ್ಪ್ರಹ ಗುಣ ಗಾನ ಮಾಡಿ ಅವರ ಹೆಸರಿನಲ್ಲಿ ಬೀದರ್ ನಲ್ಲಿ ಪ್ರಶಸ್ತಿ ಇಡುವುದಾಗಿ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here