ವೇದ ಮೂರ್ತಿ ಶ್ರೀ ಸಿದ್ದರಾಮಯ್ಯ ಅವರಿಗೆ ಶ್ರದ್ಧಾಂಜಲಿ

0
109

ಕಲಬುರಗಿ: ಹಿರಿಯ ಜೀವಿಗಳು ಸುಂದರ ಬದುಕು ನಡೆಸುವುದರೊಂದಿಗೆ ಯುವ ಪೀಳಿಗೆಗೆ ಆದರ್ಶಮಯ ಜೀವನ ನಡೆಸುವುದರೊಂದಿಗೆ ಧರ್ಮದ ದಾರಿ ತೋರಿಸುವುದೇ ನಿಜವಾದ ಜೀವನ ಎನ್ನುವುದು ಜೇವರ್ಗಿ ತಾಲೂಕಿನ ದೇಸಣಗಿ ಸರಕಾರಿ ಶಾಲಾ ಶಿಕ್ಷಕರಾದ ಬಸವರಾಜ ಜೊಗುರು ಹೇಳಿದ್ದರು.

ಸ್ನೇಹ ಸಂಗಮ ವಿವಿದ್ದೊದೇಶ ಸಂಘದ ವತಿಯಿಂದ ನಂದಿ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ತಾಜಸುಲ್ತಾನಪೂರದ ಸಿದ್ದರಾಮೇಶ್ವರ ಮಠದ ವೇದ ಮೂರ್ತಿ ಶ್ರೀ ಸಿದ್ದರಾಮಯ್ಯ ಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದು ತಲೆ ಮಾರಿನ ಜನರೆಲ್ಲ ಇನ್ನು ಮುಂದಿನ ೧೦-೧೫ ವರ್ಷಗಳಲ್ಲಿ ಸಂಪೂರ್ಣ ಕಾಣೆಯಾಗುತ್ತಾರೆ.

Contact Your\'s Advertisement; 9902492681

ಆದ್ದರಿಂದ ಇಂಥವರಿಂದ ಜೀವನಾನುಭವ ಕಲಿಯುವ ಮೂಲಕ ಉತ್ತಮ ಸಂಸ್ಕಾರ, ಸಂಸ್ಕೃತಿ, ಉಳಿಸೋಣ. ಸಂಬಂಧಗಳು  ನೋವುಗಳಿಗೆ ಸ್ಪಂಧಿಸುವಂತೆ ಇರಬೇಕು, ಹೊರತು ನೋವುಗಳಲ್ಲಿ ಬಂಧಿಸುವಂತೆ ಇರಬಾರದು ಭಕ್ತರ ನೋವುಗಳಿಗೆ ಸ್ಪಂಧಿಸಿ ಭಕ್ತರ ಮನದಲ್ಲಿ ದೈವ ಸ್ವರೂಪಿಯಾಗಿದ್ದ ವೇದ ಮೂರ್ತಿ ಶ್ರೀ ಸಿದ್ದರಾಮಯ್ಯ ಸ್ವಾಮಿ ಮಠ ಅವರೇ ನಮ್ಮೇಲ್ಲೆರಿಗೂ ಆದರ್ಶ ಪ್ರಾಯವಾಗಿದ್ದಾರೆಂದು ಹೇಳಿದ್ದರು.

ಸ೦ಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ, ಸಹಕಾಯ೯ದಶಿ೯ ಮಲಕಾರಿ ಪೂಜಾರಿ, ಸದಸ್ಯರಾದ ಸಾಯಬಣ್ಣ ಬೆಳಂ, ರಾಜಶೇಖರ ಪಾಟೀಲ,ರಘುನಂದನ ಕುಲಕರ್ಣಿ,ಶರಣು ಜೆ ಪಾಟೀಲ,ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಶಾಳ, ನಾಗೇಂದ್ರಯ್ಯ ಮಠ, ಜನಪದ ಕಲಾವಿದ ರಾಜು ಹೆಬ್ಬಾಳ, ಭರತ ಮಠ, ನಂದೀಶ ಮಠ, ಗುಪ್ತ ದಳ ಪೋಲಿಸ ಅಧಿಕಾರಿಯಾದ ರಜನಿಕಾಂತ ಬರೂಡೆ,ಶ್ರವಣ ಕುಮಾರ ಮಠ, ಶರಣು ಕಲ್ಮಠ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here