ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸುರಪುರ ತಹಸೀಲ್ ಮುಂದೆ ಸಿಐಟಿಯು ಪ್ರತಿಭಟನೆ

0
14

ಸುರಪುರ: ನಗರದ ತಹಸೀಲ್ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರೈತರ ಕಾರ್ಮಿಕರ ಅಂಗನವಾಡಿ ಆಶಾ ಮತ್ತಿತರೆ ವರ್ಗಗಳ ಅನೇಕ ಸಮಸ್ಯೆಗಳನ್ನು ಇಡೇರಿಸಲು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದಲ್ಲಿನ ರೈತರ ಕಾರ್ಮಿಕರ ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ನಿರ್ಲಕ್ಷ್ಯ ತೊರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರನ್ನು ನಿರ್ನಾಮ ಮಾಡಲೆಂದು ಭೂ ಸುಧಾರಣಾ ಕಾಯಿದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ.ಇದರಿಂದ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳುವ ಜೊತೆಗೆ ಬಂಡವಾಳ ಶಾಹಿಗಳು ಎಲ್ಲಾ ಭೂಮಿಯನ್ನು ತಮ್ಮ ಪಾಲಾಗಿಸಿಕೊಂಡು ರೈತರನ್ನು ಮುಗಿಸಲಿದ್ದಾರೆ ಎಂದರು.

Contact Your\'s Advertisement; 9902492681

ಅಂಗನವಾಡಿ ಕೇಂದ್ರಗಳನ್ನು ಸರಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ ಇದರಿಂದ ಈಗಿರುವ ಎಲ್ಲಾ ಅಂಗನವಾಡಿ ನೌಕರರನ್ನು ಬೀದಿ ಪಾಲು ಮಾಡಲಾಗುತ್ತಿದೆ.ಇನ್ನು ಆಶಾ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳಿಗಾಗಿ ಕಳೆದ ಅನೇಕ ತಿಂಗಳುಗಳಿಂದ ಹೋರಾಟ ಮಾಡಲಾಗುತ್ತಿದ್ದರು ಸರಕಾರ ನಿರ್ಲಕ್ಷ್ಯ ತೋರುತ್ತಿದೆ.ಇದರಿಂದ ಸರಕಾರಗಳು ರೈತರನ್ನು ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿರುವುದು ಗೊತ್ತಾಗಲಿದೆ.ಇದೇ ಧೋರಣೆ ಮುಂದುವರೆದಲ್ಲಿ ದೇಶದಲ್ಲಿನ ಜನರು ಮುಂದೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸುರೇಖಾ ಕುಲಕರ್ಣಿ ಯಲ್ಲಪ್ಪ ಚಿನ್ನಾಕಾರ ಬಸ್ಸಮ್ಮ ಆಲ್ಹಾಳ ಪ್ರಕಾಶ ಆಲ್ಹಾಳ ನಸೀಮಾ ಮುದನೂರು ರಾಧಾ ಬಾಯಿ ಲಕ್ಷ್ಮೀಪುರ ಬಸವರಾಜ ಕವಲ್ದಾರ್ ಮಂಜುಳಾ ಝಂಡದಕೇರಾ ಯಮನಪ್ಪ ಕಂಬಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here