ಕರ್ನಾಟಕ ಭೂ ಸುಧಾರಣೆಗಳ ಮಸೂದೆಗೆ ಅಂಗೀಕಾರ

0
45

ಬೆಂಗಳೂರು: ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ-2020 ನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ವಿರೋದ ಪಕ್ಷದ ವಿರೋಧ ಹಾಗೂ ಸಭತ್ಯಾಗದ ನಡುವೆ ನಡೆದ ವಿಧೇಯಕ ಕುರಿತ ಪರ ವಿರೋಧ ಮಾತುಗಳ ನಡುವೆ ವಿಧೇಯಕವನ್ನು ಅಂಗೀಕರಿಸಲಾಯಿತು.

ವಿಧೇಯಕ ಕುರಿತು ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದ್ದು ಕೃಷಿ ಭೂಮಿಯನ್ನು ಹೊಂದಿರದ ಅನೇಕರಿಗೆ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ಇಂದಿನ ಜೀವನಕ್ರಮದಲ್ಲಿ ಕೃಷಿ ಪ್ರೀತಿ ಉಳ್ಳವರು ಕೃಷಿಯನ್ನು ಮಾಡಲು ಅವಕಾಶ ಮಾಡಿಕೊಡುವುದು ಹಾಗೂ ಅಂತಹವರನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸದನಕ್ಕೆ ತಿಳಿಸಿದರು.

Contact Your\'s Advertisement; 9902492681

ಕರ್ನಾಟಕ ಭೂ ಸುಧಾರಣೆಗಳ ಮಸೂದೆಯಲ್ಲಿ ಮುಖ್ಯವಾಗಿ (79ಎ) ಕೆಲವು ವ್ಯಕ್ತಿಗಳು ಭೂಮಿಯನ್ನು ಅರ್ಜಿಸಲು ನಿಷೇಧ (79ಬಿ) ಕೆಲವು ವ್ಯಕ್ತಿಗಳು ಕೃಷಿ ಭೂಮಿಯನ್ನು ಧಾರಣ ಮಾಡಲು ನಿಷೇಧ ಅಂಶಗಳನ್ನು ಮಾತ್ರ ಕೈಬಿಡಲು ತಿದ್ದುಪಡಿ ತರಲಾಗುತ್ತಿದ್ದು, ಇದರಿಂದ ಕೃಷಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಕೃಷಿಪ್ರೀತಿಯುಳ್ಳವರಿಗೆ ಹೊಸದಾಗಿ ಕೃಷಿ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಕೃಷಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರೈತನಾಯಕ ಪ್ರೊ. ನಂಜುಂಡಸ್ವಾಮಿಯವರು ಸಹ ಭೂ ಸುಧಾರಣೇ ಕಾಯ್ದೆಯ 79ಎ ಗೆ ತಿದ್ದುಪಡಿ ತರಲು ಅವರು ಸದನದ ಸದಸ್ಯರಾಗಿದ್ದಾಗ ಸದನಸಲ್ಲಿಯೇ ಆಗ್ರಹಿಸಿದ್ದರು. ಈ ಹಿಂದೆ ಸಹ ವಿವಿಧ ಪಕ್ಷಗಳ ನಾಯಕರು ಈ ತಿದ್ದುಪಡಿಗಾಗಿ ಪ್ರಯತ್ನಪಟ್ಟಿದ್ದರು. ಇದಕ್ಕಾಗಿ ಹಿಂದಿನ ಸರ್ಕಾರದಲ್ಲಿ ಆಗಿನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಮಿತಿಯನ್ನು ಸಹ ರಚಿಸಿ ತಿದ್ದುಪಡಿಗೆ ಮುಂದಾಗಲಾಗಿತ್ತು. ಆದರೆ, ಕಾರಾಣಾಂತರಗಳಿಂದ ಸಾಧ್ಯವಾಗಿರಲಿಲ್ಲ, ಇಂತಹ ಕ್ರಾಂತಿಕಾತಿ ತಿದ್ದುಪಡಿಗೆ ತಾವು ಸಾಕ್ಷಿಯಾಗಿರುವುದು ಹರ್ಷ ಎನಿಸಿದೆ ಎಂದರು.

1961 ರ 79ಎ ಮತ್ತು 79ಬಿ ಭೂ ಸುಧಾರಣೆಗಳ ಅಧಿನಿಯಮ ಉಲ್ಲಂಘನೆಯ ಪ್ರಕರಣದಡಿಯಲ್ಲಿ ಕೆಲವು ವರುಷಗಳ ತರುವಾಯ ಭೂಮಿಯನ್ನು ಖರೀದಿಸಿದ ವ್ಯಕ್ತಿಗಳ ವಿರುದ್ಧ ಕಂದಾಯ ಇಲಾಖೆಯ ಆದಿಕಾರಿಗಳು ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಜನಸಾಮನ್ಯರಿಗೆ ತೊಂದರೆ ನೀಡುತ್ತಿದ್ದ ಘಟನೆಗಳನ್ನು ಪರಿಶೀಲಿಸಿ ಸದರಿ ಅಧಿನಿಯಮವನ್ನು ತಿದ್ದುಪಡಿ ಮಾಡಿ ಕೃಷಿ ಭೂಮಿಯನ್ನು ಖರೀದಿಸುವುದರ ಮೇಲಿನ ಮತ್ತು ಕೃಷಿ ಭೂಮಿಯನ್ನು ಖರೀದಿಸುವವನು ಅಂಥ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸುವುದರ ಮೇಲಿನ ನಿರ್ಬಂದವನ್ನು ತೆಗೆದು ಹಾಕಲಾಗುತ್ತಿದೆ.

ಎ-ವರ್ಗದ ನೀರಾವರಿ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಮಾರಾಟ ಮಾಡುವುದು, ನಿರ್ದಿಷ್ಟಪಡಿಸಲಾದ ಹಣಕಾಸು ಸಂಸ್ಥೆಯ ಪರವಾಗಿ ಮಾತ್ರವೇ ಕೃಷಿ ಭೂಮಿಯನ್ನು ಅಡಮಾನ ಮಾಡಲು ಮತ್ತು ಪರಿಶಿಷ್ಟ ಜಾತಯಿ ಹಾಗೂ ಪಂಗಡದ ಮಂಜೂರು ಮಾಡಿದ ಭೂಮಿಗೆ ಸಂಬಂಧಿಸಿದಂತೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ತಿಳಿಸಿದರು.

ವಿರೋಧ ಪಕ್ಷಗಳ ಗದ್ದಲದ ನಡುವೆ ವಿಧೇಯಕ ಮಂಡಿಸುತ್ತಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸಾಥ್ ನೀಡಿ ಮಾತನಾಡಿದ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಅವರು ತಿದ್ದುಪಡಿಯ ಮೂಲ ಉದ್ದೇಶ ಕೃಷಿಕರಲ್ಲದವರು ಭೂಮಿ ಖರೀದಿಸಲು ಅನುಸರಿಸುತ್ತಿದ್ದ ವಾಮಾ ಮಾರ್ಗಗಳನ್ನು ತಡೆಯುವುದು ಹಾಗೂ ಕಾಯಿದೆಯ ಹೆಸರಲ್ಲಿ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳವನ್ನು ಕಡಿಮೆ ಮಾಡುವುದಾಗಿದೆ.

ವಿರೋದ ಪಕ್ಷಗಳನ್ನು ವಿದೇಯಕವನ್ನು ಪೂರ್ಣವಾಗಿ ಓದಿಕೊಂಡು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು ಹೊರತಾಗಿ ಈ ರೀತಿ ಸಭಾತ್ಯಾಗ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಪಕ್ಷದ ಸಭಾನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ವಿದೇಯಕ ಕುರಿತು ಮಾತನಾಡಿ ನೀಡಿದ ಸಲಹೆಗಳನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಸ್ವಾಗತಿಸಿ ಅವರ ಸಲಹೆಗಳನ್ನು ತಿದ್ದುಪಡಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ವಿಧೇಯಕ ಕುರಿತು ಸಚಿವರು ಮಾತನಾಡುತ್ತಿರುವಾಗಿ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಿಧೇಯಕದ ಪ್ರತಿಯನ್ನು ಹರಿದು ಹಾಕುವು ಮೂಲಕ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಘಟನೆ ಇಂದು ನಡೆಯಿತು.

ಇದೇ ಸಂದರ್ಭದಲ್ಲಿ ಸಣ್ಣ ಹಿಡುವಳಿದಾರರಿಗೆ, ನೀರಾವರಿ ಜಮೀನಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಸರ್ಕಾರದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನಕ್ಕೆ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here