ಶಹಾಬಾದ:ಉತ್ತರ ಪ್ರದೇಶದಲ್ಲಿ ಗುರುವಾರ ಹತ್ರಾಸ್ ಪೀಡಿತ ಕುಟುಂಬಕ್ಕೆ ಬೇಟಿ ನೀಡಲು ತೆರಳುವ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ, ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ.ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ ಯುವತಿಯ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರ ವಿರೋಧ ವ್ಯಕ್ತಪಡಿಸಿದರೂ ಪೊಲೀಸರು ಸಾಕ್ಷ್ಯ ನಾಶಪಡಿಸಲು ರಾತ್ರೋ ರಾತ್ರಿ ಪೆಟ್ರೋಲ್ ಸುರಿದು ಅಂತ್ಯಕ್ರಿಯೆ ಮಾಡಿದ್ದಾರೆ. ಇಂತಹ ಹೀನಾಯ ಕಾರ್ಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದು ನೋಡಿದರೇ ಯುಪಿಯ ಮುಖ್ಯಮಂತ್ರಿಯ ಆದೇಶ ಪ್ರಕಾರವೇ ನಡೆದಿದೆ ಎಂದು ಎದ್ದು ಕಾಣಿಸುತ್ತಿದೆ.
ಅನ್ಯಾಯ ವಿರುದ್ಧ ಪ್ರತಿಭಟನೆ ಮಾಡಿದರೇ, ನ್ಯಾಯ ಕೇಳಿದರೇ ಲಾಠಿ ಪ್ರಹಾರ ನಡೆಸಿ ಎಫ್ಆರ್ಐ ಮಾಡಲಾಗುತ್ತಿದೆ. ಇದೊಂದು ಹಿಟ್ಲರ್ ಆಡಳಿತವಾಗಿದೆ. ಅಲ್ಲದೇ ಅನ್ಯಾದ ವಿರುದ್ಧ ಹೋರಾಟಕ್ಕಿಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದು ಕಾನೂನುಬಾಹಿರವಾಗಿದೆ. ಘಟನೆಯ ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರಲ್ಲದೇ, ಅನ್ಯಾಕ್ಕೊಳಗಾದ ಕುಟುಂಬ ವರ್ಗದವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಮೃತ್ಯಂಜಯ್ ಹಿರೇಮಠ, ಶರಣಗೌಡ ಪಾಟೀಲ, ಗಿರೀಶ ಕಂಬಾನೂರ, ಶರಣು ಪಗಲಾಪೂರ,ಡಾ.ಅಹ್ಮದ್ ಪಟೇಲ್, ರಾಜೇಶ ಯನಗುಂಟಿ, ಕಿರಣ ಚವ್ಹಾಣ, ಸಾಹೇಬಗೌಡ ಬೋಗುಂಡಿ, ಸಯ್ಯದ್ ಜಹೀರ್, ಮಹ್ಮದ್ ಮಸ್ತಾನ,ಮುನ್ನಾ ಪಟೇಲ್, ಶಿವರಾಜ ಕೋರೆ,ಸೂರ್ಯಕಾಂತ ಕೋಬಾಳ,ಶಂಕರ ಕುಸಾಳೆ, ಮರಲಿಂಗ ಕಮರಡಗಿ,ಅವಿನಾಶ ಕಂಬಾನೂರ, ಶಿವಕುಮಾರ ತಳವಾರ, ಫಜಲ್ ಪಟೇಲ್ ಇತರರು ಇದ್ದರು.