ಕಲಬುರಗಿ: ಭಾರತೀಯ ಜನತಾ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳ ನೇಮಕ ಮಾಡುವುದರಲ್ಲಿ ಹಾಗೂ ರಾಜ್ಯ ಮಟ್ಟದ ವಿವಿಧ ನಾಮ ನಿರ್ದೇಶನ ಮಾಡುವುದರಲ್ಲಿ ಭಾರತೀಯ ಜನತಾ ಪಕ್ಷದಿಂದ, ಮಾದಿಗ ಸಮುದಾಯಕ್ಕೆ ಅನ್ಯಾಯವಾವುತ್ತಿರುವುದನ್ನು ಖಂಡಿಸಿ ಡಾ. ಬಾಬುಜಗಜೀವನರಾಮ ಅಭಿವೃದ್ದಿ ಮತ್ತು ಹೋರಾಟ ಸಮಿತಿಯ ವತಿಯಿಂದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ನಳಿನಕುಮಾರ ಕಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾದಿಗ ಸಮಾಜಕ್ಕೆ ಬಿಜೆಪಿ ರಾಜ್ಯ ಘಟಕದಲ್ಲಿ ಯಾವುದೇ ಸ್ಥಾನಮಾನ ನೀಡಿರುವುದಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ಮಾದಿಗ ಸಮಾಜ ನಿಷ್ಠೆಯಿಂದ ಮತ್ತು ನಿಸ್ವಾರ್ಥದಿಂದ ಎಲ್ಲ ಬಗೆಯ ಚುನಾವಣೆಯಲ್ಲಿ ಮತಗಳನ್ನು ಹಾಕಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವಾಗಲೂ ಬಿಜೆಪಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳಲ್ಲಿ ಈ ಸಮಾಜಕ್ಕೆ ಸೂಕ್ತ ಪದಾಧಿಕಾರಿಯ ಹುದ್ದೆಗಳು ಸಿಕ್ಕಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ಅವರಿಗೆ ಬರೆದ ಪತ್ರದಲ್ಲಿ ಸಮಿತಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷನ ನಳಿನಕುಮಾರ ಕಟೀಲ್ ಅವರಿಗೆ ಸಮಿತಿ ಜಿಲ್ಲಾಧ್ಯಕ್ಷ ರಾಜು ಎಸ್.ಕಟ್ಟಿಮನಿ ಮತ್ತು ಪ್ರಧಾನ ಕಾರ್ಯದರ್ಶಿ ಸಚಿನ ಆರ್. ಕಟ್ಟಿಮನಿ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.