ರಾಮನಿಗೆ ಸಿಕ್ಕ ಮನ್ನಣೆ ಮಹರ್ಷಿ ವಾಲ್ಮೀಕಿ ಗೂ ಸಿಗಲಿ: ಶಿವಕುಮಾರ ಮ್ಯಾಗಳಮನಿ

0
70

ಕವಿತಾಳ : ಪಟ್ಟಣದ ಮಸ್ಕಿ ಕ್ರಾಸ್ ( ವಾಲ್ಮೀಕಿ ನಾಮಫಲಕ) ಹತ್ತಿರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ಕವಿತಾಳ ಮತ್ತು ವಿವಿಧ ಸಂಘಟನೆಗಳ ಮತ್ತು ಮುಖಂಡರ ನೇತೃತ್ವದಲ್ಲಿ ವಾಲ್ಮೀಕಿ ಮಹರ್ಷಿಯವರ ಜಯಂತಿ ಯನ್ನು ಆಚರಣೆ ಮಾಡಲಾಯಿತು.

ಜಯಂತಿ ಕಾರ್ಯಕ್ರಮ ವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷ ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಕ್ರಿ.ಪೂ 500 ಕಾಲಘಟ್ಟದಲ್ಲಿ ಭಾರತದಲ್ಲಿ ಜನಿಸಿದ ವಾಲ್ಮೀಕಿ ಯವರು ವಿದ್ಯೆ ಕೆಲವರಿಗೆ ಸಿಮೀತವಾದ ಆ ಕಾಲಘಟ್ಟದಲ್ಲಿ ತಮ್ಮ ಸ್ವಂತದ ಶಕ್ತಿ ಮತ್ತು ದಿವ್ಯ ಜ್ಞಾನ, ತಪ್ಪಿಸಿನ ಪರಿಣಾಮವಾಗಿ ರಾಮಾಯಣ ಗ್ರಂಥವನ್ನು ಬರೆದು ವಿಶ್ವಕ್ಕೆ ನೀಡಿದರು.

Contact Your\'s Advertisement; 9902492681

ನಿಜ ರಾಮಯಾಣಯದಲ್ಲಿರುವ ಮನುಕುಲದ ಹಿತ ಕಾಯುವ ಸಾರವನ್ನು ಎತ್ತಿ ಹಿಡಿಯಬೇಕಿದೆ ಹಾಗೂ ತಳ ಸಮುದಾಯದ ಹಿನ್ನೆಲೆಯಲ್ಲಿ ಬಂದ ವಾಲ್ಮೀಕಿ ಯವರಿಗೆ ಜಾತಿ ಆಧಾರಿತ ಭಾರತದಲ್ಲಿ ಸರಿಯಾದ ಮನ್ನಣೆ ಸಿಗುತ್ತಿಲ್ಲ, ರಾಮನಿಗೆ ಸಿಕ್ಕ ಮನ್ನಣೆ ವಾಲ್ಮೀಕಿ ಗೆ ಸಿಗುತ್ತಿಲ್ಲ ಇದು ದುರಂತ. ಇಬ್ಬರಿಗೂ ಮನ್ನಣೆ ಸಿಗಬೇಕಿದೆ ಎಂದರು.

ವಾಲ್ಮೀಕಿ ಯವರು ರಾಮಾಯಣ ಕೇಲವ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತ ಅಲ್ಲ ಮನುಷ್ಯನ ಪ್ರಗತಿಗೆ ಸಂಬಂಧಿಸಿದಾಗಿದೆ. ಅದು ಒಳಗೊಂಡಿರುವ 24000 ಶ್ಲೋಕ ಮತ್ತು 07 ಖಂಡಗಳನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಿ ಮಾನವನ ಶ್ರೇಯಸ್ಸಿಗಾಗಿ ಅದನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ನಂತರ ಜಿಲ್ಲಾ ಉಪಾಧ್ಯಕ್ಷರಾದ ಭೀನಣ್ಣ ನಾಯಕ ಕಾಚಾಪುರ ಮಾತನಾಡಿ ವಾಲ್ಮೀಕಿ ಯವರನ್ನು ಒಂದು ಜಾತಿಗೆ ಸೀಮಿತ ಮಾಡದೆ ಎಲ್ಲರೊಂದತ ಅನ್ಯೋನ್ಯತೆ ಯಿಂದ ಬಾಳೋಣ ಸಮಾಜದ ಒಳಿತಿಗಾಗಿ ಒಂದಾಗಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಕವಿತಾಳ ಘಟಕದ ಅಧ್ಯಕ್ಷರಾದ ಹನುಮಗೌಡ ನಾಯಕ, ವಿವಿಧ ಸಮಾಜದ ಮುಖಂಡರಾದ ಯಮನ್ನಪ್ಪ ದಿನ್ನಿ, ನಿಂಗಪ್ಪ ತೋಳ, ಶಿವನಪ್ಪ , ಲಾಳೇಶ್, ಯಂಕೋಬ ನಾಯಕ, ಮುಗ್ದಮ್ ಸಾಬ್, ಮುಸ್ತಫ್ ಸೇರಿ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here