ಭಿಕ್ಷಾಟನೆ, ಚಿಂದಿ ಆಯುವ ಮಕ್ಕಳ ರಕ್ಷಣೆ ಕುರಿತು ಅರಿವು

0
44

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಗೌತಮ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಚಿಂಚೋಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಭಿಕ್ಷಾಟನೆ ಹಾಗೂ ಚಿಂದಿ ಆಯುವ ಮಕ್ಕಳ ರಕ್ಷಣೆ ಕುರಿತು ಶುಕ್ರವಾರ ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣ, ಸುಪರ್ ಮಾರ್ಕೇಟ್, ಗಂಜ, ಸುಲ್ತಾನಪೂರ ರೋಡ, ರಾಜಾಪೂರ. ನೃಪತುಂಗಾ ಕಾಲೋನಿ, ದರ್ಗಾ ಹಾಗೂ ಇಟ್ಟಿಗೆ ಭಟ್ಟಿ ಸ್ಥಳಗಳಲ್ಲಿ ಪಾಲಕರು ಮತ್ತು ಸಾರ್ವಜನಿಕರಿಗೆ ಕಾನೂನು ಅರಿವು , ಜಾಗೃತಿ ಹಾಗೂ ತಿಳಿವಳಿಕೆ ಕಾರ್ಯಕ್ರಮ ಮೂಲಕ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚಿಂಚೋಳ್ಳಿ ಗೌತಮ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ಆರ್ ಗಣಪತರಾವ, ಕಲಬುರಗಿ ಮಾರ್ಗದರ್ಶಿ ಸಂಸ್ಥೆ ಸಂಯೋಜಕ ಸುಂದರಾಜ, ಕಲಬುರಗಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಗೂ ಸದರಿ ಕಾರ್ಯಕ್ರಮದಲ್ಲಿ ಗೌತಮ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸಿಬ್ಬಂದಿಗಳಾದ ಸುಜಾತಾ, ರೇವಪ್ಪಾ, ಮಲ್ಲಿಕಾರ್ಜುನ ಹಾಗೂ ರಾಹುಲ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here