ಕಲಬುರಗಿ: ಲಾಕ್ ಡೌನ್ ದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ವಾಹನ ಸವಾರರಿಗೆ ಹಾಗೂ ರೈತರಿಗೆ ಮಾಸ್ಕ್ ನೆಪದಲ್ಲಿ ದಂಡ ವಿಧಿಸಿ ಅವಾಚ್ಯವಾಗಿ ನಿಂದಿಸುವುದನ್ನು ತಪ್ಪಿಸಲು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಇಂದು ಪೊಲೀಸ್ ಮಹಾ ನಿರೀಕ್ಷಕರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಮುಖಂಡರಾದ ಸಾಜೀದ ಅಲಿ ರಂಜೋಳ್ಳ್ವಿ, ಗುರುಲಿಂಗಪ್ಪ ಟೆಂಗಳಿ, ಜಯರಾಜ್ ಕಿಣಿಗಿಕರ, ಬಾಬಾ ಫಕ್ರುದ್ದೀನ್,ವಿಜಯ ಚೇಂಗಟಾ,ಶಿವು ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.