ನೂತನ ನಾಡಕಚೇರಿಯ ಸದುಪಯೋಗವನ್ನುಸಾರ್ವಜನಿಕರು ಪಡೆದುಕೊಳ್ಳಿ- ಶಾಸಕ ಮತ್ತಿಮಡು

0
26

ಶಹಾಬಾದ:ಹೊಸ ತಾಲೂಕಾ ರಚನೆಯಾದ ನಂತರ ಸರಕಾರದ ಕಂದಾಯ ಇಲಾಖೆಯ ಅನುದಾನದಲ್ಲಿ ಮೊದಲ ಸರಕಾರಿ ನಾಡಕಚೇರಿಯ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರ ಸದುಪಯೋಗವನ್ನು ನಗರದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ನಗರದ  ಕಂದಾಯ ಇಲಾಖೆಯಿಂದ ರಾಮಮೊಹಲ್ಲಾದಲ್ಲಿ ನಿರ್ಮಾಣಗೊಂಡ ನೂತನ ನಾಡಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಬಾಡಿಗೆ ಕಟ್ಟಡದಲ್ಲಿ ನಾಡಕಚೇರಿ ಕಾರ್ಯಾಲಯ ನಡೆಯುತ್ತಿತ್ತು.ಅಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು. ರಾಮಮೊಹಲ್ಲಾದಲ್ಲಿ ನಾಡಕಛೇರಿ ನಿರ್ಮಿಸಲು ಸ್ಥಳ ಇರುವುದನ್ನು ಮನಗಂಡು ಕಂದಾಯ ಇಲಾಖೆಯ 20 ಲಕ್ಷ ರೂ. ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ಸರಕಾರಿ ಕಟ್ಟಡವೆಂದು ತಾತ್ಸಾರ ತೋರದೇ, ನಿಮ್ಮ ಮನೆಯಂತೆ ಸ್ವಚ್ಛತೆ ಕಡೆಗೆ ಗಮನ ನೀಡಬೇಕೆಂದು ಹೇಳಿದರು.

Contact Your\'s Advertisement; 9902492681

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಸಾರ್ವಜನಿಕರಿಗೆ ಅನುಕುಲವಾಗುವ ನಿಟ್ಟಿನಲ್ಲಿ ನಾಡಕಛೇರಿಯ ಕಟ್ಟಡ ಉದ್ಘಾಟನೆಯಾಗಿದ್ದು, ಒಂದೆರಡು ದಿನಗಳನ್ನು ಇದೇ ಕಟ್ಟಡದಲ್ಲಿ ಸಾರ್ವಜನಿಕರೆ ಸೇವಾ ಕಾರ್ಯಗಳು ಪ್ರಾರಂಭವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಂಗಳ ಮುಖಿಯವರಿಗೆ ಮಾಸಿಕ ವೇತನ ಮಂಜೂರಾತಿ ಪತ್ರಗಳನ್ನು ಶಾಸಕರು ವಿತರಿಸಿದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ತಾಪಂ ಅಧ್ಯಕ್ಷೆ ಸಂಗೀತಾ ಕಾರೊಳ್ಳಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಚವ್ಹಾಣ, ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ, ಅರುಣ ಪಟ್ಟಣಕರ್, ನಾಗರಾಜ ಮೇಲಗಿರಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಕನಕಪ್ಪ ದಂಡಗುಲಕರ್, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ,ನಿಂಗಣ್ಣ ಹುಳಗೋಳಕರ್, ಭೀಮಯ್ಯ ಗುತ್ತೆದಾರ,ರವಿ ರಾಠೋಡ,ಶಿವುಗೌಡ, ಬಸವರಾಜ ಮದ್ರಕಿ, ಬಸವರಾಜ ಬಿರಾದಾರ, ಅಣ್ಣಪ್ಪ ದಸ್ತಾಪೂರ, ಶರಣು ವಸ್ತ್ರದ್,ಜಯಶ್ರೀ ಸೂಡಿ, ಶಶಿಕಲಾ ಸಜ್ಜನ್,ಪಾರ್ವತಿ ಪವಾರ, ಶ್ರೀಧರ ಜೋಷಿ,ರಾಜು ಚವ್ಹಾಣ ಕಲಬುರಗಿ, ವಿರೇಶ ಬಂದಳ್ಳಿ,ಸಂಜಯ ವಿಠಕರ್,ಶೇರ ಅಲಿ, ರಾಜೇಶ ಯನಗುಂಟಿಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here