ಶರಣರ ವಚನಗಳು ಮನುಕುಲದ ದಾರಿದೀಪವಾಗಿವೆ : ಹಾರಕೂಡ ಶ್ರೀಗಳು

0
58

ಕಲಬುರಗಿ: ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಬಸವಾದಿ ಶರಣರ ವಚನಗಳು ಮನುಕುಲದ ದಾರಿದೀಪವಾಗಿವೆ,ಅವುಗಳನ್ನು ಅರಿತು ನಡೆದಾಗ ಜಗತ್ತಿನ ಏಳಿಗೆ ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ನಗರದ ಅಂಬಾರಾಯ ಅಷ್ಠಗಿ ಯವರ ಮನೆಯಲ್ಲಿ “ಮಹಾಮನೆ” ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಸಂಕಷ್ಟಮಯ ಸಂದರ್ಭದಲ್ಲಿ ಪ್ರಕೃತಿಯನ್ನು ಆರಾಧಿಸುವುದರ ಜೋತೆಗೆ ಭಕ್ತಿ ಮಾರ್ಗದ ಮೂಲಕ ಮನುಷ್ಯ ನೆಮ್ಮದಿಯನ್ನು ಕಂಡು ಕೊಳ್ಳಬಹುದಾಗಿದೆ ಎಂದು ಶ್ರೀಗಳು ನುಡಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಮಾತನಾಡಿ, ಪೂಜ್ಯರಾದ ಹಾರಕೂಡ ಶ್ರೀಗಳು ನಮ್ಮ ಮನೆಗೆ ಬಂದು ಆಶೀರ್ವಚನ ನೀಡಿರುವುದು ಇಲ್ಲಿ ಉಪಸ್ಥಿತರಿರುವ ಸಕಲ ಭಕ್ತರ ಸೌಭಾಗ್ಯ ಎಂದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು, ಇಂದಿನ ವಿಷಮ ಪರಿಸ್ಥಿತಿಯಲ್ಲಿ ಶರಣರ ವಚನಗಳು ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ನೀಡಿದ ಸಂವಿಧಾನವು ಮನುಕುಲದ ಸ್ವಚ್ಛ ಮತ್ತು ಆನಂದಮಯ ಬದುಕಿಗೆ ದಿವ್ಯೌಷಧವಾಗಿವೆ. ಬಸವಾದಿ ಶರಣರ ವಚನಗಳು ಹಾಗೂ ಡಾ.ಅಂಬೇಡ್ಕರ್ ರು ರಚಿಸಿದ ಸಂವಿಧಾನ ಸೂರ್ಯ ಚಂದ್ರರಿರುವ ವರೆಗೆ ಪ್ರಚಲಿತವಾಗಿರುತ್ತವೆ ಎಂದು ಅಂಬಾರಾಯ ಅಷ್ಠಗಿ ಅಭಿಪ್ರಾಯಿಸಿದರು.ಈ ಸಂದರ್ಭದಲ್ಲಿ ಕುಮಾರಿ ಅನುಷ್ಕಾ ಅಷ್ಠಗಿ ಹಾಗೂ ಆರಾಧ್ಯ ಅಷ್ಠಗಿ ಶರಣರ ವಚನಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಶ್ರೀಗಳ ಆಪ್ತ ಕಾರ್ಯದರ್ಶಿ ಅಪ್ಪಣ್ಣ, ಪತ್ರಿಕಾ ಛಾಯಾಗ್ರಾಹಕ ರಾಜು ಕೋಷ್ಠಿ, ಕಲಬುರಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ಅಂಬಾರಾಯ ಅಷ್ಠಗಿ, ಬಿಜೆಪಿ ಮುಖಂಡ ಹಾಗೂ ಚಿಂತಕ ಪ್ರೊ.ಯಶವಂತರಾಯ ಅಷ್ಠಗಿ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶಿವ ಅಷ್ಠಗಿ, ವನೀತಾ ಅಷ್ಠಗಿ, ಶ್ರೀಮಂತ ಕೋಟ್ರೆ, ಸುನಿಲ್ ಕೋಟ್ರೆ, ಪ್ರಿಯಾಂಕಾ ಅಷ್ಠಗಿ, ವಿಜೇತಾ ಕೋಟ್ರೆ, ಅಶುತೋಷ, ಅನಿರುದ್ಧ ಅನುಷ್ಕಾ, ಆರಾಧ್ಯ ಮತ್ತು ಆರುಷ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here