ಕಲಬುರಗಿ: ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ಆಸ್ತಿಯ ವಿಚಾರವಾಗಿ ಒಂದೇ ಕುಟುಂಬದ ಮೂವರು ಮಂದಿಯನ್ನು ಬರ್ಬರಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ನಡೆದಿದೆ.
ಮಲ್ಕಪ್ಪ ಚಿನ್ನಯ್ಯ (60) ಶಂಕ್ರಪ್ಪ ಮಲ್ಕಪ್ಪ (26) ಮತ್ತು ಚಿನ್ನಪ್ಪ ಮಲ್ಕಪ್ಪ (27) ಕೊಲೆಯಾದ ದುರ್ದೈವಿಗಳು. ಮಲ್ಕಪ್ಪ ಚಿನ್ನಯ್ಯ ಹಾಗೂ ಇಬ್ಬರು ಮಕ್ಕಳನ್ನು ಮೇದಕ್ ಗ್ರಾಮದ ಹೊರವಲಯದ ಜಮೀನ್ ಒಂದರಲ್ಲಿ ಮೂವರನ್ನು ತಡೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಮತ್ತೋರ್ವ ಮಗ ಸೇಡಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೊಲೆಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಕೊಲೆಗೆ ಜಮೀನು ವಿವಾದವೆ ಕಾರಣ ಎಂದು ಅನುಮಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.