ಬಿ ಆರ್ ಪಾಟೀಲ ಆರೋಪ ಸತ್ಯಕ್ಕೆ ದೂರ

0
856

ಆಳಂದ: ಕಡಗಂಚಿ ಗ್ರಾಮದಲ್ಲಿ ನಡೆದಿರುವ ಘಟನೆಗೆ ಮಾಜಿ ಶಾಸಕ ಬಿ ಆರ್ ಪಾಟೀಲ ರಾಜಕೀಯ ಬಣ್ಣ ಹಚ್ಚಲು ಯತ್ನಿಸುತ್ತಿದ್ದಾರೆಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಡಗಂಚಿ ಗ್ರಾಮದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದರೂ ಚುನಾವಣಾ ಅಕ್ರಮ ನಡೆಸಲಾಗುತ್ತಿತ್ತು. ಜನರಿಗೆ ಗುಂಪು ಗುಂಪಾಗಿ ಸೇರಿಸಿ ಮಧ್ಯ, ಮಾಂಸ ಸರಬರಾಜು ಮಾಡಿ ಬಾಡೂಟ ಬಡಿಸುತ್ತಿದ್ದರು ಅದರ ಕುರಿತು ಪೊಲೀಸರಿಗೆ ದೂರು ಬಂದಾಗ ಪೋಲಿಸರು ಚುನಾವಣಾ ಅಕ್ರಮ ತಡೆಯಲು ಮುಂದಾಗಿದ್ದಾರೆ ಇದನ್ನೆ ನೆಪವಾಗಿಟ್ಟುಕೊಂಡ ಮಾಜಿ ಶಾಸಕ ಬಿ ಆರ್ ಪಾಟೀಲ ಪೊಲೀಸ್ ಇಲಾಖೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆ ಬಿ ಆರ್ ಪಾಟೀಲ ಅನುಮಾನ ಪಡುತ್ತಿದ್ದಾರೆ ಅವರು ಎಂದಿಗೂ ಕಾನೂನನ್ನು ಗೌರವಿಸಿಲ್ಲ ಎಲ್ಲ ನಿಯಮಗಳನ್ನು ಗಾಳಿಗೆ ತೂರಿಯೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಜನ ಅವರಿಗೆ ಪಾಠ ಕಲಿಸಿದರೂ ಜ್ಞಾನ ಬಂದಿಲ್ಲ ಎಂದಿದ್ದಾರೆ.

ಕಡಗಂಚಿಯಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ತಾವು ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಹೊಡೆದಿದ್ದಾರೆ ಅವರೂ ಇವರೂ ಎನ್ನದೇ ಯಾರೂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ಮೇಲೂ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಆದರೂ ಮಾಜಿ ಶಾಸಕ ಬಿ ಆರ್ ಪಾಟೀಲ ದುರುದ್ದೇಶಪೂರ್ವಕವಾಗಿ ಪೊಲೀಸ್ ಇಲಾಖೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ ಎಂದು ಹೇಳಿದ್ದಾರೆ.

ತಾಲೂಕಿನಲ್ಲಿ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಮಾಜಿ ಶಾಸಕ ಬಿ ಆರ್ ಪಾಟೀಲ ಕೇವಲ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಪೊಲೀಸ್ ಇಲಾಖೆಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೇ ಕಾರ್ಯಕರ್ತರನ್ನು ಮುಂದೆ ಬಿಟ್ಟು ತಾಲೂಕಿನಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮಂಗಳವಾರದ ಸುದ್ದಗೋಷ್ಠಿಯಲ್ಲಿ ಬಿ ಆರ್ ಪಾಟೀಲ ಮಾಡಿದ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದುದ್ದು ಅವುಗಳಲ್ಲಿ ಯಾವುದೇ ಹುರುಳಿಲ್ಲ. ಆಳಂದ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಇರುವ ಜನಬೆಂಬಲವನ್ನು ನೋಡಿ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಹೀಗಾಗಿ ಪದೇ ಪದೇ ಮಾಧ್ಯಮಗಳಿಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here