‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಡಿ.೨೫ ರಂದು

0
104

ಕಲಬುರಗಿ: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ೮೪ನೇ ಜನ್ಮದಿನದ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನವು ಡಿ.೨೫ ರಂದು ನಗರದ ಶಹಾಬಜಾರದಲ್ಲಿರುವ ಸುಲಫಲ ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಿರಿಯರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರ ಜನ್ಮದಿನವನ್ನು ಸಾಮಾಜಿಕವಾಗಿ ಆಚರಿಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಹಾಗೂ ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ ತಿಳಿಸಿದ್ದಾರೆ.

ಧರ್ಮಸಿಂಗ್‌ರ ಕಟ್ಟಾ ಅನುಯಾಯಿಗಳಾದ ಹಿರಿಯ ಜೀವಿಗಳಾದ ಶಾಂತಗೌಡ ದುಮ್ಮದ್ರಿ, ಸಂಗಣ್ಣಾ ದೇಸಾಯಿ (ಅಲ್ಲಾಗೋಳ) ನೆಲೋಗಿ, ದೇವೀಂದ್ರಪ್ಪ ಪೂಜಾರಿ ಬಿರಾಳ, ಚಂದ್ರಿಕಾ ಪರಮೇಶ್ವರ, ಅಮೀರ್ ಜಮಾದಾರ, ತಿಪ್ಪಣ್ಣ ನಾಯ್ಕೋಡಿ ಕಟ್ಟಿ ಸಂಗಾವಿ ಅವರಿಗೆ ‘ಧರ್ಮಪ್ರಜೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

೨೫ರ ಬೆಳಗ್ಗೆ ೯.೪೫ಕ್ಕೆ ನಗರದ ಸುಲಫಲ ಮಠದಲ್ಲಿ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ಜೇವರ್ಗಿ ತಾಲೂಕಾ ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ ದುದ್ದಗಿ ಮಳ್ಳಿ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here