ಕಲಬುರಗಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2020-21ನೇ ಸಾಲಿನಲ್ಲಿ ಕ್ರೀಡಾ ಅಭ್ಯರ್ಥಿಗಳ ಆಯ್ಕೆಗಾಗಿ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು ಇದೇ ಡಿಸೆಂಬರ್ 28 ರಂದು ಬೆಳಿಗ್ಗೆ 10 ಗಂಟೆಗೆ ಆಯಾ ತಾಲೂಕಿನ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಡಿಸೆಂಬರ್ 31 ರಂದು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಳಂದ ತಾಲೂಕಿಗೆ ಸಂಬಂಧಿಸಿದಂತೆ ಆಳಂದ ತಾಲೂಕಾ ಕ್ರೀಡಾಂಗಣ, ಅಫಜಲಪುರ ತಾಲೂಕಿಗೆ ಸಂಬಂಧಿಸಿದಂತೆ ಅಫಜಲಪುರದ ಸರ್ಕಾರಿ ಜೂನಿಯರ ಕಾಲೇಜ ಪ್ರೌಢ ಶಾಲಾ ವಿಭಾಗದಲ್ಲಿ, ಚಿತ್ತಾಪೂರ ತಾಲೂಕಿಗೆ ಸಂಬಂಧಿಸಿದಂತೆ ಚಿತ್ತಾಪುರ ತಾಲೂಕು ಕ್ರೀಡಾಂಗಣ, ಚಿಂಚೋಳಿ ತಾಲೂಕಿಗೆ ಸಂಬಂಧಿಸಿದಂತೆ ಚಂದಾಪುರ ಆದರ್ಶ ಶಾಲೆ, ಜೇವರ್ಗಿ ತಾಲೂಕಿಗೆ ಸಂಬಂಧಿಸಿದಂತೆ ಜೇವರ್ಗಿ ತಾಲೂಕು ಕ್ರೀಡಾಂಗಣ, ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ ಹಾಗೂ ಸೇಡಂ ತಾಲೂಕಿಗೆ ಸಂಬಂಧಿಸಿದಂತೆ ಸೇಡಂ ತಾಲೂಕು ಕ್ರೀಡಾಂಗಣದಲ್ಲಿ ಆಯ್ಕೆ ಪರೀಕ್ಷೆ ಜರುಗಲಿದೆ.
ಕಿರಿಯರ ವಿಭಾಗದ ಅಥ್ರ್ಲೇಟಿಕ್ಸ್ ಹಾಗೂ ಹಾಕಿ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 2020ರ ಜೂನ್ 1ರ ನಂತರ ಜನಿಸಿದ ಬಾಲಕ/ಬಾಲಕಿಯರು ಹಾಗೂ ಕಿರಿಯರ ವಿಭಾಗದ ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 7ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 2007ರ ಜೂನ್ 1ರ ನಂತರ ಜನಿಸಿದ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ.
ಹಿರಿಯರ ವಿಭಾಗದ ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 2003ರ ಜೂನ್ 1ರ ನಂತರ ಜನಿಸಿದ ಯುವಕ, ಯುವತಿಯರು 2021ರ ಜನವರಿ 17 ರಂದು ಬೆಳಿಗ್ಗೆ 9 ಗಂಟೆಯಿಂದ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ನೇರವಾಗಿ ರಾಜ್ಯ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಆಯಾ ತಾಲೂಕಿನ ಆಯ್ಕೆ ಸ್ಥಳದಿಂದ ನಿಗದಿತ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಅರ್ಜಿಗಳನ್ನು ಅವಶ್ಯಕ ದಾಖಲಾತಿಗಳೊಂದಿಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2021ರ ಜನವರಿ 2ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು.
ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡಲಾಗುವುದಿಲ್ಲ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ಹಾಕಿ ತರಬೇತುದಾರ ಸಂಜಯ ಬಾಣದ ಇವರ ಮೊಬೈಲ್ ಸಂಖ್ಯೆ 9844029235 ಗೆ ಸಂಪರ್ಕಿಸಲು ಕೋರಿದೆ.
ಆಯಾ ತಾಲೂಕಿನಲ್ಲಿರುವ ತರಬೇತುದಾರರ, ಸಂಚಾರಕರ ಹೆಸರು ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಆಳಂದ: ತರಬೇತುದಾರ ಹಾಗೂ ಸಂಚಾಲಕ ಸಂತೋಷ ರಾಠೋಡ-ಮೊಬೈಲ್ ಸಂಖ್ಯೆ 9008765003, ಅಫಜಲಪೂರ: ಅಶೋಕ ಎಂ. ಮೊಬೈಲ್ ಸಂ. 9900636909, ಶ್ರೀಮಂತ ನಂದಗಾವ್ (ಟಿ.ಪಿ.ಓ)- 9448831052. ಚಿತ್ತಾಪೂರ: ಮರಿಯಪ್ಪ ಬೋಮ್ಮನಳಿಕರ್ ಮೊ.ಸಂ. 9945230160, ಚಿಂಚೋಳಿ: ಮಲ್ಲಿಕಾರ್ಜುನ ನೆಲ್ಲಿ-9945750794, ಜೇವರ್ಗಿ: ಸಂಗಮೇಶ ಕೊಂಬಿನ್-9535666606, ಕಲಬುರಗಿ: ಸಂಜಯ ಬಾಣದ ಮೊ.ಸಂ. 9844029235 ಹಾಗೂ ಸೇಡಂ: ಪ್ರವೀಣ ಕುಮಾರ-8884774416.