ಗ್ರಾ.ಪಂ ಚುನಾವಣೆ: ಕಲಬುರಗಿ ಜಿಲ್ಲೆಯ ಎಲ್ಲಾ 4173 ಸ್ಥಾನಗಳ ಫಲಿತಾಂಶ ಪ್ರಕಟ

0
103

ಕಲಬುರಗಿ: ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಕಳೆದ ಡಿ.22 ಮತ್ತು 27 ರಂದು ನಡೆದ 11 ತಾಲೂಕಿನ 242 ಗ್ರಾಮ ಪಂಚಾಯತಿಗಳ 1427 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟಗೊಂಡಿದೆ.

ಜಿಲ್ಲೆಯ 11 ತಾಲೂಕಿನ 1427 ಕ್ಷೇತ್ರಗಳ 4173 ಸ್ಥಾನಗಳ ಪೈಕಿ ಈಗಾಗಲೆ 392 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 3781 ಅಭ್ಯರ್ಥಿಗಳ ಆಯ್ಕೆಗಾಗಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.

Contact Your\'s Advertisement; 9902492681

ಬುಧವಾರ ನಡೆದ ಮತ ಎಣಿಕೆಯಲ್ಲಿ ಈ 3781 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ. ಒಟ್ಟು 4173 ಸ್ಥಾನಗಳ ಭರ್ತಿಗೆ 2029 ಸ್ಥಾನ ಸಾಮಾನ್ಯ ಮತ್ತು 2144 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.

4173 ಸದಸ್ಯ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ವರ್ಗವಾರು ಅಭ್ಯರ್ಥಿಗಳನ್ನು ನೋಡಿದಾಗ ಅನುಸೂಚಿತ ಜಾತಿಯ 1188, ಅನುಸೂಚಿತ ಪಂಗಡದ 279, ಹಿಂದುಳಿದ “ಅ” ವರ್ಗದ 499, ಹಿಂದುಳಿದ “ಬ” ವರ್ಗದ 128 ಹಾಗೂ ಸಾಮಾನ್ಯ ವರ್ಗದ 2079 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ತಾಲೂಕುವಾರು ಜಯಗಳಿಸಿದ ಪ್ರವರ್ಗವಾರು ವಿವರ ಇಂತಿದೆ: ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳ 166 ಕ್ಷೇತ್ರಗಳ 523 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 148, ಅನುಸೂಚಿತ ಪಂಗಡದ 31, ಹಿಂದುಳಿದ “ಅ” ವರ್ಗದ 63, ಹಿಂದುಳಿದ “ಬ” ವರ್ಗದ 19 ಹಾಗೂ ಸಾಮಾನ್ಯ ವರ್ಗದ 262 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 28 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 495 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಆಳಂದ ತಾಲೂಕಿನ 36 ಗ್ರಾಮ ಪಂಚಾಯತಿಗಳ 202 ಕ್ಷೇತ್ರಗಳ 600 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 161, ಅನುಸೂಚಿತ ಪಂಗಡದ 37, ಹಿಂದುಳಿದ “ಅ” ವರ್ಗದ 78, ಹಿಂದುಳಿದ “ಬ” ವರ್ಗದ 18 ಹಾಗೂ ಸಾಮಾನ್ಯ ವರ್ಗದ 306 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 42 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 558 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಅಫಜಲಪೂರ ತಾಲೂಕಿನ 28 ಗ್ರಾಮ ಪಂಚಾಯತಿಗಳ 177 ಕ್ಷೇತ್ರಗಳ 498 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 99, ಅನುಸೂಚಿತ ಪಂಗಡದ 28, ಹಿಂದುಳಿದ “ಅ” ವರ್ಗದ 92, ಹಿಂದುಳಿದ “ಬ” ವರ್ಗದ 23 ಹಾಗೂ ಸಾಮಾನ್ಯ ವರ್ಗದ 256 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 42 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 456 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಕಮಲಾಪುರ ತಾಲೂಕಿನ 16 ಗ್ರಾಮ ಪಂಚಾಯತಿಗಳ 99 ಕ್ಷೇತ್ರಗಳ 270 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 103, ಅನುಸೂಚಿತ ಪಂಗಡದ 19, ಹಿಂದುಳಿದ “ಅ” ವರ್ಗದ 18, ಹಿಂದುಳಿದ “ಬ” ವರ್ಗದ 2 ಹಾಗೂ ಸಾಮಾನ್ಯ ವರ್ಗದ 128 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 10 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 260 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಕಾಳಗಿ ತಾಲೂಕಿನ 14 ಗ್ರಾಮ ಪಂಚಾಯತಿಗಳ 85 ಕ್ಷೇತ್ರಗಳ 239 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 75, ಅನುಸೂಚಿತ ಪಂಗಡದ 15, ಹಿಂದುಳಿದ “ಅ” ವರ್ಗದ 25, ಹಿಂದುಳಿದ “ಬ” ವರ್ಗದ 6 ಹಾಗೂ ಸಾಮಾನ್ಯ ವರ್ಗದ 118 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 17 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 222 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಶಹಾಬಾದ ತಾಲೂಕಿನ 4 ಗ್ರಾಮ ಪಂಚಾಯತಿಗಳ 31 ಕ್ಷೇತ್ರಗಳ 90 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 28, ಅನುಸೂಚಿತ ಪಂಗಡದ 4, ಹಿಂದುಳಿದ “ಅ” ವರ್ಗದ 9, ಹಿಂದುಳಿದ “ಬ” ವರ್ಗದ 3 ಹಾಗೂ ಸಾಮಾನ್ಯ ವರ್ಗದ 46 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 11 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 79 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಯಡ್ರಾಮಿ ತಾಲೂಕಿನ 15 ಗ್ರಾಮ ಪಂಚಾಯತಿಗಳ 89 ಕ್ಷೇತ್ರಗಳ 261 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 58, ಅನುಸೂಚಿತ ಪಂಗಡದ 20, ಹಿಂದುಳಿದ “ಅ” ವರ್ಗದ 39, ಹಿಂದುಳಿದ “ಬ” ವರ್ಗದ 9 ಹಾಗೂ ಸಾಮಾನ್ಯ ವರ್ಗದ 135 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 53 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 208 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಜೇವರ್ಗಿ ತಾಲೂಕಿನ 23 ಗ್ರಾಮ ಪಂಚಾಯತಿಗಳ 123 ಕ್ಷೇತ್ರಗಳ 369 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 79, ಅನುಸೂಚಿತ ಪಂಗಡದ 37, ಹಿಂದುಳಿದ “ಅ” ವರ್ಗದ 49, ಹಿಂದುಳಿದ “ಬ” ವರ್ಗದ 13 ಹಾಗೂ ಸಾಮಾನ್ಯ ವರ್ಗದ 191 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 36 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 333 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಚಿತ್ತಾಪೂರ ತಾಲೂಕಿನ 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ 410 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 124, ಅನುಸೂಚಿತ ಪಂಗಡದ 24, ಹಿಂದುಳಿದ “ಅ” ವರ್ಗದ 49, ಹಿಂದುಳಿದ “ಬ” ವರ್ಗದ 12 ಹಾಗೂ ಸಾಮಾನ್ಯ ವರ್ಗದ 201 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 91 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 319 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಚಿಂಚೋಳಿ ತಾಲೂಕಿನ 27 ಗ್ರಾಮ ಪಂಚಾಯತಿಗಳ 163 ಕ್ಷೇತ್ರಗಳ 453 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 176, ಅನುಸೂಚಿತ ಪಂಗಡದ 36, ಹಿಂದುಳಿದ “ಅ” ವರ್ಗದ 32, ಹಿಂದುಳಿದ “ಬ” ವರ್ಗದ 10 ಹಾಗೂ ಸಾಮಾನ್ಯ ವರ್ಗದ 199 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 26 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 427 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಸೇಡಂ ತಾಲೂಕಿನ 27 ಗ್ರಾಮ ಪಂಚಾಯತಿಗಳ 159 ಕ್ಷೇತ್ರಗಳ 460 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಯ 137, ಅನುಸೂಚಿತ ಪಂಗಡದ 28, ಹಿಂದುಳಿದ “ಅ” ವರ್ಗದ 45, ಹಿಂದುಳಿದ “ಬ” ವರ್ಗದ 13 ಹಾಗೂ ಸಾಮಾನ್ಯ ವರ್ಗದ 237 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಲ್ಲಿ 36 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರೆ 424 ಸ್ಥಾನಗಳು ಮತದಾನದ ಮೂಲಕ ಆಯ್ಕೆಯಾಗಿವೆ.

ಸಾರ್ವತ್ರಿಕ ಚುನಾವಣೆಯ ನಂತರ ಜಿಲ್ಲೆಯ 242 ಗ್ರಾಮ ಪಂಚಾಯತಿಗಳಲ್ಲಿ ಯಾವುದೇ ಸ್ಥಾನ ಖಾಲಿ ಉಳಿದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here