ಕಲಬುರಗಿ: ಕಥೆಗಾರ, ಲೇಖಕ ಪ್ರೊ. ಎಚ್.ಟಿ. ಪೋತೆ ಅವರು ರಚಿಸಿದ ಬಯಲೆಂಬೋ ಬಯಲು (ಬಯೋಪಿಕ್ ಕಾದಂಬರಿ), ಕಾಲದ ಕೆಂಡಗಳ ನಡುವೆ ( ಕಥಾ ಸಂಕಲನ), ಗಾಂಧಿ ಪ್ರತಿಮೆ (ಪ್ರಬಂಧ ಸಂಕಲನ) ಈ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಜ. 11 ರಂದು ನಡೆಯಲಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.45ಕ್ಕೆ ಜರುಗಲಿರುವ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಗುಲ್ಬರ್ಗ ವಿವಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಬಯಲೆಂಬೋ ಬಯಲು ಕೃತಿ ಕುರಿತು ಗದಗನ ಸಿದ್ದು ಯಾಪಲಪರ್ವಿ, ಗಾಂಧಿ ಪ್ರತಿಮೆ, ಕಾಲದ ಕೆಂಡಗಳ ನಡುವೆ, ಗಾಂಧಿ ಪ್ರತಿಮೆ ಕುರಿತು ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಲಿದ್ದಾರೆ.
ಡಾ. ಎಚ್.ಟಿ. ಪೋತೆ ಉಪಸ್ಥಿತರಿರಲಿದ್ದು, ಡಾ. ಶ್ರೀಶೈಲ ನಾಗರಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ.